Asianet Suvarna News Asianet Suvarna News

ಸಿಗರೆಟ್‌ ಬಿಟ್ಟರೆ ಈ ಕಂಪನಿ ಕೊಡುತ್ತೆ 6 ದಿನ ಹೆಚ್ಚು ರಜೆ, ವೇತನವೂ ಹೆಚ್ಚು!

ಇಲ್ಲೊಂದು ಕಂಪನಿ ಸಿಗರೆಟ್‌ ಬಿಟ್ಟರೆ 6 ದಿನ ಹೆಚ್ಚು ರಜೆ ನೀಡುತ್ತೆ, ಅಲ್ಲದೇ ರಜಾ ದಿನದ ವೇತನವನ್ನೂ ನೀಡುತ್ತೆ. ಇದು ತಮಾಷೆಯಲ್ಲ... ಅಷ್ಟಕ್ಕೂ ಯಾವುದು ಆ ಕಂಪನಿ? ಹೀಗೆ ಮಾಡಲು ಕಾರಣವೇನು? ಇಲ್ಲಿದೆ ವಿವರ

Company offers non smoking employees 6 extra paid leaves for not taking cigarette breaks
Author
Bangalore, First Published Dec 3, 2019, 12:03 PM IST

ಟೋಕಿಯೋ[ಡಿ.03]: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ... ಹೀಗೆಂದು ಸಿಗರೇಟ್ ಪ್ಯಾಕ್‌ನಲ್ಲಿ ಬರೆದಿದ್ದರೂ, ಇದನ್ನು ಸೇದುವವರ ಸಂಖ್ಯೆ ಮಾತ್ರ ಇಳಿಮುಖವಾಗಿಲ್ಲ. ಇದರಿಂದ ಶ್ವಾಸಕೋಶ ಸಂಬಂಧಿತ ರೋಗಗಳು ಬಾಧಿಸುತ್ತವೆ ಎಂದರೂ ಯುವಜನರು ಮಾತ್ರ ಧೂಮಪಾನ ವ್ಯಸನ ಮುಂದುವರೆಸುತ್ತಿದ್ದಾರೆ. ಹೀಗಿರುವಾಗ ಕಂಪನಿಯೊಂದು ಸಿಗರೇಟ್ ಸೇದದವರಿಗಾಗಿ ಅಚ್ಚರಿಯ ಆಫರ್ ನೀಡಿದೆ.

ಹಛದು  ಉದ್ಯೋಗಿಗಳು ಸಿಗರೆಟ್‌ ಸೇದುವಾಗ ಸಮಯ ವ್ಯರ್ಥ ಮಾಡುತ್ತಾರೆ ಎಂಬ ಕಾರಣಕ್ಕೆ ಜಪಾನಿನ ಕಂಪನಿಯೊಂದು ಸಿಗರೆಟ್‌ ಸೇವನೆ ಮಾಡದ ಉದ್ಯೋಗಿಗಳನ್ನು ಪ್ರೋತ್ಸಾಹಿಸಿ ಹೆಚ್ಚುವರಿಯಾಗಿ ಆರು ದಿನ ರಜೆ ನೀಡುತ್ತಿದೆ.

ಈ ವಿಡಿಯೋ ನೋಡಿದ್ರೆ ನೀವಿನ್ನು ಜೀವಮಾನದಲ್ಲಿ ಸಿಗರೇಟ್ ಮುಟ್ಟೋಲ್ಲ!

ಕೆಲವರು ಸಿಗರೆಟ್‌ ಸೇವನೆ ನೆಪದಲ್ಲಿ ವಿರಾಮ ಪಡೆದುಕೊಳ್ಳುತ್ತಾರೆ. ಆದರೆ ನಾವು ಮಾತ್ರ ಬೆವರು ಸುರಿಸಿ ಕೆಲಸ ಮಾಡಬೇಕು ಎಂದು ಇತರ ಉದ್ಯೋಗಿಗಳು ದೂರು ನೀಡಿದ್ದರು. ಹೀಗಾಗಿ ಜಪಾನಿನ ಪಿಯಾಲಾ ಎಂಬ ಕಂಪನಿಯ ಸಿಇಒ ಇಂಥದ್ದೊಂದು ಆಫರ್‌ ನೀಡಿದ್ದಾರೆ.

29ನೇ ಅಂತಸ್ತಿನಲ್ಲಿ ಇರುವ ಈ ಕಂಪನಿಯಲ್ಲಿ ಸಿಗರೆಟ್‌ ಸೇದಲು ಉದ್ಯೋಗಿಗಳು ಬೇಸ್‌ಮೆಂಟ್‌ಗೆ ಇಳಿದುಬರಬೇಕು. ಒಂದು ಬಾರಿ ಸಿಗರೆಟ್‌ ಸೇದಿ ವಾಪಸ್‌ ಬರಲು ಕನಿಷ್ಠ 15 ನಿಮಿಷವಾದರೂ ಬೇಕು. ಇದರಿಂದ ಕಂಪನಿಯ ಉತ್ಪಾದಕತೆ ಕಡಿಮೆ ಆಗುತ್ತಿದೆಯಂತೆ.

ನೀವೂ ಸಿಗರೇಟ್ ಸೇದ್ತೀರಾ? ಈ ವಿಡಿಯೋ ಒಮ್ಮೆ ನೋಡ್ಬಿಡಿ!

Follow Us:
Download App:
  • android
  • ios