Asianet Suvarna News Asianet Suvarna News

2008ಕ್ಕೆ ಮುನ್ನ ನೇಮಕವಾದ ಪಿಯು ಬೋಧಕರಿಗೆ ಬಿಇಡಿ ಕಡ್ಡಾಯವಲ್ಲ

  • ಸರ್ಕಾರಿ, ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ 2008ರ ಫೆ.4ಕ್ಕೂ ಮುನ್ನ ನೇಮಕಗೊಂಡಿರುವ ಉಪನ್ಯಾಸಕರಿಗೆ ಗುಡ್ ನ್ಯೂಸ್
  • ಕಡ್ಡಾಯವಾಗಿ ಬಿ.ಇಡಿ ವ್ಯಾಸಂಗ ಮಾಡಬೇಕೆಂಬ ಷರತ್ತಿನಿಂದ ಸರ್ಕಾರ ವಿನಾಯಿತಿ
Bed not mandatory Before 2008 appointed PU Lecturers snr
Author
Bengaluru, First Published Oct 26, 2021, 7:47 AM IST

ಬೆಂಗಳೂರು (ಅ.26):  ಸರ್ಕಾರಿ (Govt), ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ (College) 2008ರ ಫೆ.4ಕ್ಕೂ ಮುನ್ನ ನೇಮಕಗೊಂಡಿರುವ ಉಪನ್ಯಾಸಕರಿಗೆ ಕಡ್ಡಾಯವಾಗಿ ಬಿ.ಇಡಿ (Bed) ವ್ಯಾಸಂಗ ಮಾಡಬೇಕೆಂಬ ಷರತ್ತಿನಿಂದ ಸರ್ಕಾರ ವಿನಾಯಿತಿ ನೀಡಿದೆ.

ಜತೆಗೆ, ಈ ಅವಧಿ ನಂತರ ನೇಮಕಗೊಂಡಿರುವ ಉಪನ್ಯಾಸಕರಿಗೆ ಬಿ.ಇಡಿ ವ್ಯಾಸಂಗಕ್ಕೆ ಅನುಮತಿ ನೀಡಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ (Primary and High school) ಪ್ರಧಾನ ಕಾರ್ಯದರ್ಶಿ ಅವರು ಈ ವಿಚಾರದ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೋಮವಾರ ಪತ್ರದಲ್ಲಿ ಈ ಅವಕಾಶ ನೀಡುವಂತೆ ಸೂಚಿಸಿದ್ದಾರೆ.

3,500 ಪೇದೆ ಹುದ್ದೆಗೆ 3.5 ಲಕ್ಷ ಜನ ಪರೀಕ್ಷೆ..!

ಪಿಯು ಉಪನ್ಯಾಸಕರ (PU lecturers) ವೃಂದ ಮತ್ತು ನೇಮಕಾತಿ ನಿಯಮಗಳಿಗೆ 2008ರ ಫೆ.4ರಂದು ತಿದ್ದುಪಡಿ ತಂದು ಸ್ನಾತಕೋತ್ತರ ಪದವಿ (Post Graduation) ಜತೆಗೆ ಬಿ.ಇಡಿ ವಿದ್ಯಾರ್ಹತೆ ಕಡ್ಡಾಯಗೊಳಿಸಲಾಗಿದೆ. ಹಾಗಾಗಿ ಈ ತಿದ್ದುಪಡಿ ನಿಯಮಾವಳಿ ಬರುವ ಮೊದಲು ನೇಮಕಗೊಂಡಿರುವ ಪಿಯು ಉಪನ್ಯಾಸಕರಿಗೆ ಕಡ್ಡಾಯ ಬಿ.ಇಡಿ ವಿದ್ಯಾರ್ಹತೆ ಷರತ್ತು ವಿಧಿಸಲು ಸಾಧ್ಯವಿಲ್ಲ.

ಆದರೆ, ಆ ನಂತರ ನೇಮಕಗೊಂಡಿರುವ ಸರ್ಕಾರಿ, ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿನ ಉಪನ್ಯಾಸಕರು ಬಿ.ಇಡಿ ಶಿಕ್ಷಣ ಪಡೆಯುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದ್ದು ಅಂತಹ ಎಲ್ಲ ಪಿಯು ಉಪನ್ಯಾಸಕರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮೂಲಕ ಬಿ.ಇಡಿ ಪ್ರವೇಶ ಪಡೆದು ವ್ಯಾಸಂಗ ಮಾಡಲು ಒಂದು ಬಾರಿ ವಿಶೇಷ ಅವಕಾಶ ಕಲ್ಪಿಸುವಂತೆ ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಅನುದಾನಿತ ಶಾಲಾ-ಕಾಲೇಜುಗಳ ಬೋಧಕ, ಬೋಧಕೇತರ ವರ್ಗದ ಒಕ್ಕೂಟದ ಅಧ್ಯಕ್ಷ ಎಂ.ಪಿ.ಕರಬಸಪ್ಪ, ಆದಷ್ಟುಬೇಗ ಬಿ.ಇಡಿ ರಹಿತರಿಗೆ ಕೆಎಸ್‌ಒಯುನಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಮನವಿ ಮಾಡಿದ್ದಾರೆ.

ಅತಿಥಿ ಉಪನ್ಯಾಸಕರ ನೇಮಕ

 

 ರಾಜ್ಯಾದ್ಯಂತ(Karnataka) ಸರ್ಕಾರಿ ಪ್ರೌಢ ಶಾಲೆಗಳಲ್ಲಿ(Government Schools) ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವಾಗ ಖಾಲಿ ಇರುವ ಶಿಕ್ಷಕರ(Teachers) ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಹೋಗಲಿ ಅತಿಥಿ ಶಿಕ್ಷಕರನ್ನು ಸಹ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಿಕೊಳ್ಳದಿರುವುದು ಸರ್ಕಾರಿ ಪ್ರೌಢ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ(Students) ಸಮಸ್ಯೆಯಾಗಲಿದೆ.

ಖಾಲಿ ಇರುವ ಶಿಕ್ಷಕರನ್ನು ಕೂಡಲೇ ನೇಮಕಾತಿ(Recruitment) ಮಾಡಿಕೊಂಡು ಶಾಲೆಯಲ್ಲಿನ ಶಿಕ್ಷಕರ ಕೊರತೆ ನೀಗಿಸುವ ಕುರಿತು ಸದನದಲ್ಲಿ ಗಂಭೀರವಾಗಿ ಚರ್ಚೆಯಾಗಿದೆ. ಆದರೆ, ಸರ್ಕಾರ ಇನ್ನೂ ನೇಮಕಕ್ಕೆ ಮುಂದಾಗುತ್ತಿಲ್ಲ. ಈಗ ಶಾಲೆ ಪ್ರಾರಂಭವಾಗಿ 2 ತಿಂಗಳಾಗುತ್ತಾ ಬಂದಿದ್ದರೂ ಅತಿಥಿ ಶಿಕ್ಷಕರನ್ನು(Guest Teachers) ಪೂರ್ಣ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಳ್ಳದೆ ಕೇವಲ ಶೇ. 64 ರಷ್ಟು ಶಿಕ್ಷಕರ ನೇಮಕ ಮಾಡಿಕೊಳ್ಳಲು ಮುಂದಾಗಿದೆ.
ರಾಜ್ಯ ಸರ್ಕಾರ ಈ ಕುರಿತು ಸುತ್ತೋಲೆ ಹೊರಡಿಸಿ, ರಾಜ್ಯಾಧ್ಯಂತ ಪ್ರೌಢ ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಶೇ. 64 ರಷ್ಟು ಮಾತ್ರವೇ ಭರ್ತಿ ಮಾಡಿಕೊಳ್ಳುವಂತೆ ಕಟ್ಟುನಿಟ್ಟಾಗಿ ಆದೇಶ ಮಾಡಿಲಾಗಿದೆ. ಹೀಗಾಗಿ, ಪ್ರೌಢ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಯಾವ ವಿಷಯಕ್ಕೆ ಆದ್ಯತೆಯ ಮೇಲೆ ಭರ್ತಿ ಮಾಡಿಕೊಳ್ಳಬೇಕು ಎನ್ನುವ ಇಕ್ಕಟ್ಟು ಆಯಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳದ್ದಾಗಿದೆ.

Follow Us:
Download App:
  • android
  • ios