Asianet Suvarna News Asianet Suvarna News

12 ವರ್ಷದ ಪೋರ Data Scientist, ಪ್ರಸಿದ್ಧ ಐಟಿ ಕಂಪೆನಿಯಲ್ಲಿ ಕೆಲಸ!

12 ವರ್ಷದ ಬಾಲಕ, 7ನೇ ತರಗತಿ ವಿದ್ಯಾರ್ಥಿ ಈಗ ಐಟಿ ಕಂಪೆನಿಯ ಉದ್ಯೋಗಿ| ನನ್ನ ಯಶಸ್ಸಿಗೆ ಕಾರಣ ನನ್ನ ತಂದೆ ಎಂದ ಬಾಲಕ| ಕೋಡಿಂಗ್ ಕಲಿಯಲು ಆಸಕ್ತಿ ಹೇಗೆ ಬಂತು? ಕಾರಣ ಯಾರು ಗೊತ್ತಾ?

Class 7 Student Works As A Data Scientist In Hyderabad
Author
Bangalore, First Published Nov 26, 2019, 1:29 PM IST

ಹೈದರಾಬಾದ್[ನ.26]: 7ನೇ ತರಗತಿ ವಿದ್ಯಾರ್ಥಿ, 12 ವರ್ಷದ ಪೋರನನ್ನು ಹೈದರಾಬಾದ್ ನ ಸಾಫ್ಟ್ ವೇರ್ ಕಂಪೆನಿಯೊಂದು ಡೇಟಾ ಸೆಂಟಿಸ್ಟ್ ಆಗಿ ನೇಮಕ ಮಾಡಿದೆ. ಸದ್ಯ ಈ ಪುಟ್ಟ ಬಾಲಕ ಎ್ಲಲೆಡೆ ಸದ್ದು ಮಾಡುತ್ತಿದ್ದಾನೆ. 

ಸಿದ್ಧಾರ್ಥ ಶ್ರೀವಾಸ್ತವ್ ಪಿಲ್ಲಿ ಏಳನೇ ತರಗತಿ ವಿದ್ಯಾರ್ಥಯಾಗಿದ್ದು, ಶ್ರೀ ಚೈತನ್ಯ ಸ್ಕೂಲ್ ನಲ್ಲಿ ಕಲಿಯುತ್ತಿದ್ದಾನೆ. ಅವರನ್ನು ಹೈದರಾಬಾದ್ ನ ಸಾಫ್ಟ್ ವೇರ್ ಕಂಪೆನಿ ಮಾಂಟೆಗ್ನೆ ಸ್ಮಾರ್ಟ್ ಬ್ಯುಸಿನೆಸ್ ಸೊಲ್ಯೂಷನ್ಸ್ ಡೇಟಾ ಸೆಂಟಿಸ್ಟ್ ಆಗಿ ನೇಮಕ ಮಾಡಿದೆ. 

ವಾರದಲ್ಲಿ ನಾಲ್ಕೇ ದಿನ ಕೆಲಸ ಕೊಟ್ಟ ಕಂಪನಿಗೆ ಸಿಕ್ಕ ಭರ್ಜರಿ ಫಲ!

ANIಗೆ ಪ್ರತಿಕ್ರಿಯಿಸಿದ ಈ ಬಾಲಕ 'ನನಗೀಗ 12 ವರ್ಷ ಹಾಗೂ ಮಾಂಟೆಗ್ನೆ ಸ್ಮಾರ್ಟ್ ಸಾಫ್ಟ್ ವೇರ್ ಕಂಪೆನಿಯಲ್ಲಿ ಡೇಟಾ ಸೈಂಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದೇನೆ. ನಾನು ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ನಲ್ಲಿ ಕಲಿಯುತ್ತಿದ್ದೇನೆ. ಈ ಸಾಫ್ಟ್ ವೇರ್ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಲು ತನ್ಮತಯ್ ಬಕ್ಷೀ ನನಗೆ ಬಹುದೊಡ್ಡ ಪ್ರೇರಣೆ. ಅವರು ಚಿಕ್ಕ ವಯಸ್ಸಲ್ಲೇ ಗೂಗಲ್ ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಈ ಮೂಲಕ ಜಗತ್ತಿಗೆ ಆರ್ಟಿಫಿಶಲ್ ಇಂಟೆಲಿಜನ್ಸ್ ಕ್ರಾಂತಿ ಅದೆಷ್ಟು ಸುಂದರ ಎಂದು ಸಾರಲು ಯತ್ನಿಸಿದ್ದರು' ಎಂದಿದ್ದಾರೆ.

ಅಲ್ಲದೇ 'ನಾನು ನನ್ನ ತಂದೆಗೆ ಧನ್ಯವಾದ ತಿಳಿಸಲಿಚ್ಛಿಸುತ್ತೇನೆ. ಅವರು ನಾನು ಬಹಳ ಚಿಕ್ಕವನಿದ್ದಾಗಲೇ ಕೋಡಿಂಗ್ ಮಾಡುವುದನ್ನು ಹೇಳಿಕೊಟ್ಟರು. ನಾನು ಇಷ್ಟು ಚಿಕ್ಕ ವಯಸ್ಸಿನಲ್ಲಿ ನೌಕರಿ ಗಿಟ್ಟಿಸಿಕೊಳ್ಳಲು ನನ್ನ ತಂದೆಯೇ ಕಾರಣ. ಇಂದು ನಾನೇನೇ ಆಗಿದ್ದರೂ ಅದು ನನ್ನ ತಂದೆಯ ಸಹಾಯದಿಂದ' ಎಂದಿದ್ದಾರೆ.
 

Follow Us:
Download App:
  • android
  • ios