Asianet Suvarna News Asianet Suvarna News

ವಾರದಲ್ಲಿ ನಾಲ್ಕೇ ದಿನ ಕೆಲಸ ಕೊಟ್ಟ ಕಂಪನಿಗೆ ಸಿಕ್ಕ ಭರ್ಜರಿ ಫಲ!

ವಾರದಲ್ಲಿ ನಾಲ್ಕೇ ದಿನ ಕೆಲಸ/ ಪರಿಣಾಮದಿಂದ ಹೊರಬಂತು ಅಚ್ಚರಿ ಫಲಿತಾಂಶ/ ಉದ್ಯೋಗಿಗಳಿಗೂ ಇದೆ ಇಷ್ಟ/ ಉತ್ಪಾದಕತೆಯಲ್ಲಿ ಶೇ. 40 ಹೆಚ್ಚಳ ಕಂಡ ಕಂಪನಿ

Microsoft Japan Says Productivity rose 40 Percent after introducing four say week
Author
Bengaluru, First Published Nov 5, 2019, 9:22 PM IST

ಜಪಾನ್(ನ. 05)  ಇಂಥದ್ದೊಂದು ಪ್ರಯೋಗವನ್ನು ಮಾಡಿದ ಕಂಪನಿ ಒಳ್ಳೆಯ ಫಲವನ್ನೇ ಪಡೆದಿದೆ. ಜಪಾನ್ ಮೈಕ್ರೋಸಾಫ್ಟ್ ಕಂಪೆನಿ ಯಶಸ್ವಿಯಾಗಿ ಇಂಥ ಪ್ರಯೋಗ ಮಾಡಿ ಸಖತ್ ಲಾಭವನ್ನೇ ಪಡೆದಿದೆ.

ಜಪಾನ್ ನ  ಮೈಕ್ರೋಸಾಫ್ಟ್ ಕಂಪೆನಿ ಈ ವರ್ಷದ ಆಗಸ್ಟ್ ಉತ್ಪಾದಕತೆಯ ಪ್ರಮಾಣ ಲೆಕ್ಕ ಸುಮಾರು 40 ಪ್ರತಿಶತ ಹೆಚ್ಚಳವಾಗಿತ್ತು. ‘ವರ್ಕ್ ಲೈಫ್ ಚಾಯ್ಸ್ ಚಾಲೆಂಜ್’ ಅಡಿಯಲ್ಲಿ ಜಗತ್ತಿನ ಸಾಫ್ಟ್ ವೇರ್ ದೈತ್ಯ ಕಂಪೆನಿ ಈ ಒಂದು ಪ್ರಯೋಗ ಮಾಡಿ ಉತ್ತಮ ಲಾಭ ಪಡೆದುಕೊಂಡು ದಾಖಲೆ ಪುಟಗಳಲ್ಲಿ ಸೇರಿಕೊಂಡಿತು.

13 ಸಾವಿರ ನೌಕರರು ನಮ್ಮವರಲ್ಲ ಎಂದ ಕಾಗ್ನಿಜೆಂಟ್

ಜಪಾನ್ ಮೈಕ್ರೋಸಾಫ್ಟ್ ಕಂಪೆನಿ ತನ್ನಲ್ಲಿ ಕೆಲಸ ಮಾಡುತ್ತಿರುವ 2,300 ಉದ್ಯೋಗಿಗಳಿಗೆ ಆಗಸ್ಟ್ ತಿಂಗಳಿನಲ್ಲಿ ಶುಕ್ರವಾರವೂ ಸೇರಿದಂತೆ ಮೂರು ದಿನ ವೀಕೆಂಡ್ ರಜೆ ನೀಡಿತ್ತು.  ಆ ತಿಂಗಳಲ್ಲಿ ಉತ್ಪಾದಕತೆ ಪ್ರಮಾಣ 39.9 ಪ್ರತಿಶತ ಹೆಚ್ಚಳವನ್ನು ಕಂಡಿತ್ತು.

ಇದರೊಂದಿಗೆ ಮೀಟಿಂಗ್ ಅವಧಿಯನ್ನು ಮತ್ತು ಇ-ಮೆಲ್ ಗಳಿಗೆ ಪ್ರತಿಕ್ರಿಯಿಸುವ ಅವಧಿಯನ್ನೂ ಸಹ ಕಡಿತಗೊಳಿಸುವ ಸಲಹೆ ಇತ್ತು. ಮೀಟಿಂಗ್ ಅವಧಿ 30 ನಿಮಿಷಕ್ಕಿಂತ ಹೆಚ್ಚಿರಬಾರದು ಎಂಬ ಸಲಹೆಯನ್ನು ಅನುಷ್ಠಾನಗೊಳಿಸಿದಾಗ 23.1 ಪ್ರತಿಶತ ಕಡಿಮೆ ವಿದ್ಯುತ್ ಬಳಕೆ ಮತ್ತು 58.7 ಪ್ರತಿಶತ ಕಡಿಮೆ ಪ್ರಿಂಟಿಂಗ್  ಪೇಪರ್ ಸಹ ವ್ಯಯವಾಯಿತು.

ಶೇ. 92 ರಷ್ಟು ಉದ್ಯೋಗಿಗಳು ಸಹ ಈ ನಾಲ್ಕು ದಿನದ ಕೆಲಸ ಇಷ್ಟಪಟ್ಟಿದ್ದಾರೆ. ಅದು ಏನೇ ಇರಲಿ ವಾರದಲ್ಲಿ ನಾಲ್ಕು ದಿನ ಅಂದರೆ 16 ದಿನ ಕೆಲಸ ಮಾಡಿ 20 ದಿನಕ್ಕಿಂತ ಅಧಿಕ ಲಾಭ ಪಡೆದುಕೊಂಡ ಕಂಪನಿ ಮುಂದೆ ಇದೇ ಯೋಜನೆಯನ್ನು ಅನುಷ್ಠಾನ ಮಾಡುತ್ತದೆಯೋ ಕಾದು ನೋಡಬೇಕು.

Follow Us:
Download App:
  • android
  • ios