ಐಎಸ್‌ಎಲ್ 2020: ಮೊದಲ ಗೆಲುವಿನ ಕನವರಿಕೆಯಲ್ಲಿ ಬೆಂಗಳೂರು ಎಫ್‌ಸಿ
7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ತಂಡ ಚೆನ್ನೈಯಿನ್ ಎಫ್‌ಸಿ ಸವಾಲನ್ನು ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬಂಬೋಲಿಮ್(ಡಿ.04): ಇಂಡಿಯನ್ ಸೂಪರ್ ಲೀಗ್ 7ನೇ ಆವೃತ್ತಿಯ ಮೊದಲೆರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿರುವ ಬೆಂಗಳೂರು ಎಫ್‌ಸಿ ತಂಡ, 3ನೇ ಪಂದ್ಯದಲ್ಲಿ ಜಯದ ಕಾತರದಲ್ಲಿದೆ.
ಶುಕ್ರವಾರ ಇಲ್ಲಿನ ಜಿಎಂಸಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸುನಿಲ್ ಚೆಟ್ರಿ ಪಡೆ, ಚೆನ್ನೈಯಿನ್ ಎಫ್‌ಸಿ ಸವಾಲನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದು 3 ಅಂಕ ಪಡೆಯುವ ಉತ್ಸಾಹದಲ್ಲಿ ಬಿಎಫ್‌ಸಿ ತಂಡವಿದೆ. ಚೆನ್ನೈ ಕೂಡಾ ಟೂರ್ನಿಯಲ್ಲಿ 2 ಪಂದ್ಯವನ್ನಾಡಿದ್ದು, 1 ಗೆಲುವು 1 ಡ್ರಾ ಸಾಧಿಸಿದೆ. ಕಳೆದ ಆವೃತ್ತಿಯಲ್ಲಿ ಉಭಯ ತಂಡಗಳು ತಲಾ 3 ಗೆಲುವು ಪಡೆದು 1 ಡ್ರಾ ಸಾಧಿಸಿದ್ದವು.
ಕೃಷ್ಣನ ಕೃಪೆ; ಮೋಹನ್ ಬಾಗನ್‌ಗೆ ಅಂತಿಮ ಕ್ಷಣದಲ್ಲಿ ಒಲಿದ ಗೆಲುವು!
ಸ್ಥಳ: ಬಂಬೋಲಿಮ್
ಆರಂಭ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಎಟಿಕೆಗೆ ಹ್ಯಾಟ್ರಿಕ್ ಗೆಲುವು:
ಮಾರ್ಗೋ: ಇಲ್ಲಿನ ಫತ್ರೋಡಾ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಎಸ್‌ಎಲ್ ಪಂದ್ಯದಲ್ಲಿ ಎಟಿಕೆ ಮೋಹನ್ ಬಗಾನ್, ಒಡಿಶಾ ಎಫ್‌ಸಿ ವಿರುದ್ಧ 1-0 ಗೋಲಿನಿಂದ ಗೆಲುವು ಸಾಧಿಸಿತು. ಈ ಜಯದೊಂದಿಗೆ ಎಟಿಕೆ ಮೋಹನ್ ಬಗಾನ್ ಹ್ಯಾಟ್ರಿಕ್ ಗೆಲುವು ಸಾಧಿಸಿ, 9 ಅಂಕಗಳಿಂದ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಮೊದಲಾರ್ಧದಲ್ಲಿ ಉಭಯ ತಂಡಗಳು ಯಾವುದೇ ಗೋಲು ಗಳಿಸಿರಲಿಲ್ಲ. ಎಟಿಕೆಯ ಕೃಷ್ಣ (90ನೇ ನಿ.) ಗೋಲುಗಳಿಸಿ ಗೆಲುವು ತಂದುಕೊಟ್ಟರು. ಒಡಿಶಾ ಪರ ಯಾವೊಬ್ಬ ಆಟಗಾರರು ಗೋಲು ದಾಖಲಿಸಲಿಲ್ಲ.