ಬಾಂಬೋಲಿಮ್(ಡಿ.23)‌: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) 7ನೇ ಆವೃತ್ತಿಯಲ್ಲಿ ನಾರ್ತ್ ಈಸ್ಟ್‌ ಯುನೈಟೆಡ್‌ ಎಫ್‌ಸಿ ಹಾಗೂ ಒಡಿಶಾ ಎಫ್‌ಸಿ ನಡುವಣ ಮಂಗಳವಾರ ಇಲ್ಲಿ ನಡೆದ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ ಅಂತ್ಯವಾಗಿದೆ. 

ಮೊದಲಾರ್ಧದಲ್ಲಿ ನಾರ್ತ್ ಈಸ್ಟ್‌ ಮತ್ತು ಒಡಿಶಾ ತಲಾ 1-1 ಗೋಲುಗಳಿಂದ ಸಮಬಲ ಸಾಧಿಸಿದ್ದವು. ದ್ವಿತೀಯಾರ್ಧದಲ್ಲಿ 2 ಗೋಲುಗಳು ಮೂಡಿಬಂದ ಕಾರಣ ಪಂದ್ಯ ಟೈನಲ್ಲಿ ಕೊನೆಗೊಂಡಿತು.

ಅಜೇಯ ಬೆಂಗಳೂರಿಗೆ ಮೊದಲ ಸೋಲಿನ ಆಘಾತ!

ನಾರ್ತ್ ಈಸ್ಟ್‌ ಪರ ಲಂಬೋಟ್‌ (45ನೇ ನಿ.), ಅಪೈ (65ನೇ ನಿ.) ಗೋಲುಗಳಿಸಿದರೆ, ಒಡಿಶಾ ಪರ ಡಿಗೊ ಮರ್ಸಿಯೊ (23ನೇ ನಿ.) ಮತ್ತು ಅಲೆಕ್ಸಾಂಡರ್‌ (67ನೇ ನಿ.) ಗೋಲು ಬಾರಿಸಿದರು.

ಇಂದಿನ ಪಂದ್ಯ: ಜೆಮ್ಶೆಡ್‌ಪುರ-ಗೋವಾ

ಸ್ಥಳ: ತಿಲಕ್‌ ಮೈದಾನ, 
ಸಮಯ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್