ಗೋವಾ(ಫೆ.16): 7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್‌(ಐಎಸ್‌ಎಲ್‌) ಫುಟ್ಬಾಲ್ ಟೂರ್ನಿಯ ಸೆಮಿಫೈನಲ್‌ಗೇರುವ ಕನಸನ್ನು ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ಜೀವಂತವಾಗಿ ಉಳಿಸಿಕೊಂಡಿದೆ.

ಸೋಮವಾರ ಇಲ್ಲಿ ನಡೆದ ಮುಂಬೈ ಸಿಟಿ ಎಫ್‌ಸಿ ವಿರುದ್ದದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡವು 4-2 ಗೋಲುಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. 2018ರ ಬಳಿಕ ಬೆಂಗಳೂರು ಎಫ್‌ಸಿ ತಂಡವು ಇದೇ ಮೊದಲ ಬಾರಿಗೆ ಮುಂಬೈ ವಿರುದ್ದ ಗೆಲುವು ದಾಖಲಿಸಿದ ಸಾಧನೆ ಮಾಡಿದೆ.

ಬಿಎಫ್‌ಸಿಗೆ ಇಟಲಿಯ ಮಾರ್ಕೊ ಪೆಜಯುಲಿ ಹೊಸ ಕೋಚ್‌

ಈ ಗೆಲುವಿನೊಂದಿಗೆ ಬೆಂಗಳೂರು ತಂಡವು 18 ಪಂದ್ಯಗಳನ್ನಾಡಿ 22 ಅಂಕಗಳೊಂದಿಗೆ 6ನೇ ಸ್ಥಾನಕ್ಕೇರಿದ್ದರೆ, ಮುಂಬೈ ತಂಡವು 17 ಪಂದ್ಯಗಳನ್ನಾಡಿ 34 ಅಂಗಳೊಂದಿಗೆ ಎರಡನೇ ಸ್ಥಾನದಲ್ಲೇ ಭದ್ರವಾಗಿದೆ. ಲೀಗ್‌ ಹಂತದಲ್ಲಿ ಬೆಂಗಳೂರು ಎಫ್‌ಸಿ ತಂಡವು ಇನ್ನೂ ಎರಡು ಪಂದ್ಯಗಳು ಆಡಲಿದ್ದು, ಆ ಎರಡು ಪಂದ್ಯಗಳನ್ನು ಜಯಿಸಿದರೆ ಸುನಿಲ್ ಚೆಟ್ರಿ ಪಡೆ ಸೆಮಿಫೈನಲ್‌ ಪ್ರವೇಶಿಸಲಿದೆ.