ಗೋವಾ(ಫೆ.09): ಐಎಸ್‌ಎಲ್‌ 7ನೇ ಆವೃತ್ತಿಯಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಬೆಂಗಳೂರು ಎಫ್‌ಸಿ ಹೋರಾಟ ಮುಂದುವರಿಸಿದ್ದು, ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಎಟಿಕೆ ಮೋಹನ್‌ ಬಗಾನ್‌ ವಿರುದ್ಧ ಸೆಣಸಲಿದೆ. 

ಕಳೆದ 4 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿರುವ ಬಿಎಫ್‌ಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ಲೀಗ್‌ ಹಂತದಲ್ಲಿ ತಂಡಕ್ಕಿನ್ನು 4 ಪಂದ್ಯ ಬಾಕಿ ಇದೆ. ಸೆಮೀಸ್‌ಗೇರಲು 4 ಪಂದ್ಯಗಳಲ್ಲೂ ಸೋಲು ತಪ್ಪಿಸಿಕೊಳ್ಳಬೇಕಿದೆ. 

ಐಎಸ್‌ಎಲ್‌: 8 ಪಂದ್ಯಗಳ ಬಳಿಕ ಕೊನೆಗೂ ಗೆದ್ದ ಬಿಎಫ್‌ಸಿ..!

ಮೋಹನ್‌ ಬಗಾನ್‌ ಉತ್ತಮ ಲಯದಲ್ಲಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ತಂಡ ಈ ಆವೃತ್ತಿಯಲ್ಲಿ 20 ಗೋಲು ಬಾರಿಸಿದ್ದು, ಬಿಎಫ್‌ಸಿಗೆ ಕಠಿಣ ಸವಾಲು ಎದುರಾಗಲಿದೆ.