ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ ಸಿ ತಂಡವು 7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬಾಂಬೋಲಿಮ್(ಡಿ.18)‌: 7ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ಸತತ 2ನೇ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ಅಜೇಯವಾಗಿ ಉಳಿದಿದೆ. ಬಿಎಫ್‌ಸಿ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ ತಲಾ 3 ಗೆಲುವು ಹಾಗೂ ಡ್ರಾ ಸಾಧಿಸಿದ್ದು, 12 ಅಂಕಗಳಿಸಿ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ, ಒಡಿಶಾ ಎಫ್‌ಸಿ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಂದ್ಯದ ಆರಂಭದಿಂದಲೇ ಮಿಂಚಿನ ಆಟದ ಮೂಲಕ ಗಮನಸೆಳೆದ ಬಿಎಫ್‌ಸಿ ಆಟಗಾರರು ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದರು. ಪಂದ್ಯದ 38ನೇ ನಿಮಿಷದಲ್ಲಿ ನಾಯಕ ಸುನಿಲ್‌ ಚೆಟ್ರಿ, ಒಡಿಶಾ ಭದ್ರಕೋಟೆಯ ಒಳನುಗ್ಗಿ ಆಕರ್ಷಕ ಗೋಲುಗಳಿಸಿದರು. ಈ ಮೂಲಕ ಬಿಎಫ್‌ಸಿ ಗೋಲಿನ ಖಾತೆ ತೆರೆಯಿತು. ಮೊದಲಾರ್ಧದ ಅಂತ್ಯಕ್ಕೆ ಬಿಎಫ್‌ಸಿ 1-0 ಮುನ್ನಡೆ ಸಾಧಿಸಿತು.

Scroll to load tweet…

ಐಎಸ್‌ಎಲ್‌: ಬಿಎಫ್‌ಸಿಗೆ ಮತ್ತೊಂದು ಜಯದ ನಿರೀಕ್ಷೆ

ಇನ್ನು ದ್ವಿತೀಯಾರ್ಧದ ಆಟದಲ್ಲಿ ಒಡಿಶಾ ತಂಡದ ಮೇಲೆ ಹೆಚ್ಚಿನ ಹೊರೆ ಬಿತ್ತು. ಒಡಿಶಾ ತಂಡದ ಸ್ಟೀವನ್‌ ವಿನ್ಸೆಂಟ್‌ ಟೇಲರ್‌ (71ನೇ ನಿ.) ಗೋಲುಗಳಿಸಿ 1-1ರಿಂದ ಸಮಬಲ ಸಾಧಿಸಿದರು. ಇದಾಗಿ 8 ನಿಮಿಷಗಳ ಬಳಿಕ ಕ್ಲೇಟನ್‌ ಆಗಸ್ಟೊ(79ನೇ ನಿ.) ಗೋಲುಗಳಿಸಿ ಮುನ್ನಡೆ ನೀಡಿದರು. ಅಂತಿಮ ಅವಧಿವರೆಗೂ ಇದೇ ಅಂತರ ಕಾಯ್ದುಕೊಂಡ ಬಿಎಫ್‌ಸಿ ಜಯದ ನಗೆ ಬೀರಿತು.

ಇಂದಿನ ಪಂದ್ಯ: ನಾರ್ತ್ ಈಸ್ಟ್‌ ಎಫ್‌ಸಿ-ಜೆಮ್ಶೆಡ್‌ಪುರ ಎಫ್‌ಸಿ

ಸ್ಥಳ: ತಿಲಕ್‌ ಮೈದಾನ, 
ಪಂದ್ಯ ಆರಂಭ: ರಾತ್ರಿ 7.30ಕ್ಕೆ