ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡವು ಒಡಿಶಾ ಎದುರು ಸೆಣಸಲಿದ್ದು, ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬಾಂಬೋಲಿಮ್(ಡಿ.17)‌: 7ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ಅಜೇಯವಾಗಿರುವ ಬೆಂಗಳೂರು ಎಫ್‌ಸಿ ತಂಡ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದ್ದು, ಗುರುವಾರ ಒಡಿಶಾ ಎಫ್‌ಸಿ ವಿರುದ್ಧ ಸೆಣಸಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಇದುವರೆಗೂ 5 ಪಂದ್ಯಗಳಲ್ಲಿ 2 ಗೆಲುವು, 3 ಡ್ರಾನೊಂದಿಗೆ 9 ಅಂಕ ಗಳಿಸಿರುವ ಬಿಎಫ್‌ಸಿ, ಎದುರಾಳಿ ಒಡಿಶಾದ ಲಯದ ಸಮಸ್ಯೆಯನ್ನು ಲಾಭವಾಗಿಸಿಕೊಳ್ಳಲು ಎದುರು ನೋಡುತ್ತಿದೆ. ಒಡಿಶಾ ತಂಡ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತು, 1ರಲ್ಲಿ ಡ್ರಾ ಕಂಡಿದೆ. ತಂಡ ತನ್ನ ಪ್ರತಿ ಪಂದ್ಯದಲ್ಲೂ ಗೋಲು ಬಿಟ್ಟುಕೊಟ್ಟಿದ್ದು, ಟೂರ್ನಿಯಲ್ಲಿ ಈ ವರೆಗೂ ಕೇವಲ 2 ಗೋಲು ಮಾತ್ರ ಗಳಿಸಿದೆ.

Scroll to load tweet…

ISL 7: ಈಸ್ಟ್ ಬೆಂಗಾಲ್ ವಿರುದ್ಧ ಮಿಂಚಿದ ಹೈದರಾಬಾದ್!

ಮತ್ತೊಂದೆಡೆ ಬಿಎಫ್‌ಸಿ 5 ಪಂದ್ಯಗಳಲ್ಲಿ 9 ಗೋಲುಗಳನ್ನು ಗಳಿಸಿದ್ದು, 6 ಗೋಲುಗಳನ್ನು ಬಿಟ್ಟುಕೊಟ್ಟಿದೆ. ತಂಡ ತನ್ನಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಯೋಗ ನಡೆಸಲು ಈ ಪಂದ್ಯ ವೇದಿಕೆಯಾಗಲಿದೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್