ಗೋವಾ(ಡಿ.08): 7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್‌) ಫುಟ್ಬಾಲ್ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಬೆಂಗಳೂರು ಫುಟ್ಬಾಲ್(ಬಿಎಫ್‌ಸಿ) ಹಾಗೂ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ತಂಡಗಳು ಮಂಗಳವಾರ(ಡಿ.8) ಮುಖಾಮುಖಿಯಾಗಲಿವೆ.
 
ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡವು ಆಡಿರುವ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ಹಾಗೂ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರೆ, ಮತ್ತೊಂದೆಡೆ ನಾರ್ಥ್‌ಈಸ್ಟ್‌ 4 ಪಂದ್ಯಗಳಲ್ಲಿ 2 ಗೆಲುವು ಹಾಗೂ 2 ಡ್ರಾನೊಂದಿಗೆ ಅಜೇಯವಾಗುಳಿದಿದೆ. ಇಂದು ನಡೆಯಲಿರುವ ಹೈವೋಲ್ಟೇಜ್‌ ಪಂದ್ಯದಲ್ಲಿ ಬಿಎಫ್‌ಸಿಯ ರಕ್ಷಣಾ ಪಡೆ ಹಾಗೂ ನಾರ್ಥ್‌ಈಸ್ಟ್‌ನ ಆಕ್ರಮಣಕಾರಿ ಆಟಗಾರರ ನಡುವಿನ ಪೈಪೋಟಿಗೆ ಸಾಕ್ಷಿಯಾಗಲಿದೆ.

ಐಎಸ್ಎಲ್‌ 7: ಟೂರ್ನಿಯಲ್ಲಿ ಚೊಚ್ಚಲ ಗೆಲುವು ದಾಖಲಿಸಿದ ಬಿಎಫ್‌ಸಿ

ಜೆಮ್ಷಡ್‌ಪುರಕ್ಕೆ ಭರ್ಜರಿ ಜಯ:

ಸೋಮವಾರ ನಡೆದ ಎಟಿಕೆ ಮೋಹನ್ ಬಗಾನ್ ವಿರುದ್ದದ ಪಂದ್ಯದಲ್ಲಿ ಜಮ್ಷೆಡ್‌ಪುರ ತಂಡ 2-1 ಗೋಲುಗಳಿಂದ ಜಯ ಗಳಿಸಿತು. ಜಮ್ಷೆಡ್‌ಪುರ ತಂಡಕ್ಕಿದು ಮೊದಲ ಗೆಲುವಾದರೆ, ಎಟಿಕೆ ಮೋಹನ್ ಬಗಾನ್‌ ತಂಡಕ್ಕೆ ಎದುರಾದ ಮೊದಲ ಸೋಲು ಇದಾಗಿದೆ.