ಮಾರ್ಗೋ(ನ.29): ಇಂಡಿಯನ್ ಸೂಪರ್ ಲೀಗ್ 7ನೇ ಆವೃತ್ತಿಯಲ್ಲಿ ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಫುಟ್ಬಾಲ್ ಕ್ಲಬ್(ಬಿಎಫ್‌ಸಿ)ಗೆ ಎರಡನೇ ಪಂದ್ಯದಲ್ಲೂ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಿಲ್ಲ.
ಶನಿವಾರ(ನವೆಂಬರ್ 28) ಇಲ್ಲಿನ ಫತ್ರೋಡಾ ಸ್ಟೇಡಿಯಂನಲ್ಲಿ ನಡೆದ ಬಿಎಫ್‌ಸಿ ಹಾಗೂ ಹೈದ್ರಾಬಾದ್ ಎಫ್‌ಸಿ ನಡುವಿನ ಪಂದ್ಯದಲ್ಲಿ(0-0) ಗೋಲಿಲ್ಲದೇ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. 

ಪಂದ್ಯದ ಪೂರ್ಣಾವಧಿಯಲ್ಲಿ ಎರಡು ತಂಡಗಳ ಆಟಗಾರರ ನಡುವೆ ಉತ್ತಮ ಹೋರಾಟ ಮೂಡಿಬಂತಾದರೂ ಗೋಲು ದಾಖಲಿಸಲು ಮಾತ್ರ ಸಾಧ್ಯವಾಗಲಿಲ್ಲ. 7ನೇ ಆವೃತ್ತಿಯ ಐಎಸ್‌ಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿಯೂ ಬಿಎಫ್‌ಸಿ ತಂಡ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಬಿಎಫ್‌ಸಿ ಹಾಗೂ ಗೋವಾ ಎಫ್‌ಸಿ ನಡುವಿನ ಪಂದ್ಯ 2-2 ಗೋಲುಗಳೊಂದಿಗೆ ಡ್ರಾನಲ್ಲಿ ಅಂತ್ಯವಾಗಿತ್ತು.   

ಮರಡೋನಾ ಎಂಬ ಮೋಹಕ ವ್ಯಸನ

ಇದೀಗ ಟೂರ್ನಿಯಲ್ಲಿ ಚೆಟ್ರಿ ನೇತೃತ್ವದ ಬಿಎಫ್‌ಸಿ ತಂಡ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದರೆ, ಇನ್ನು ಒಡಿಶಾ ವಿರುದ್ಧ ಮೊದಲ ಪಂದ್ಯ ಗೆದ್ದಿದ್ದ ಹೈದ್ರಾಬಾದ್ ಎಫ್‌ಸಿ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.