ಶಾರ್ಜಾ(ನ.04): ಐಪಿಎಲ್‌ ಮಾದರಿಯ 3ನೇ ಆವೃತ್ತಿ ಮಹಿಳಾ ಟಿ20 ಚಾಲೆಂಜ್‌ ಟೂರ್ನಿ, ಇಲ್ಲಿ ಬುಧವಾರದಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಸೂಪರ್‌ನೋವಾಸ್‌ ಹಾಗೂ ರನ್ನರ್‌ ಅಪ್‌ ವೆಲೋಸಿಟಿ ತಂಡಗಳು ಸೆಣಸಲಿವೆ. 

ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯರು ಹಾಗೂ ಇಂಗ್ಲೆಂಡ್‌, ದ.ಆಫ್ರಿಕಾ, ವೆಸ್ಟ್‌ ಇಂಡೀಸ್‌, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್‌ ತಂಡಗಳ ಆಟಗಾರ್ತಿಯರು ಆಡಲಿದ್ದಾರೆ. ಸೂಪರ್‌ನೋವಾಸ್‌ ತಂಡವನ್ನು ಹರ್ಮನ್‌ಪ್ರೀತ್‌ ಕೌರ್‌ ಮುನ್ನಡೆಸುತ್ತಿದ್ದು, 2 ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 

ಮಹಿಳಾ T20 ಕ್ರಿಕೆಟ್‌ಗೆ ರಿಲಯನ್ಸ್ ಜಿಯೋ ಪ್ರಾಯೋಜಕತ್ವ; ನೀತಾ ಅಂಬಾನಿ ಸಂಪೂರ್ಣ ಬೆಂಬಲ!

ಇದೀಗ ಹರ್ಮನ್‌ಪ್ರೀತ್‌ ಪಡೆ ಹ್ಯಾಟ್ರಿಕ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಮೊದಲ ಪಂದ್ಯದಲ್ಲಿ ವೇಲೋಸಿಟಿ ಎದುರು ಗೆಲುವಿನ ವಿಶ್ವಾಸದಲ್ಲಿದೆ. ಇನ್ನೊಂದೆಡೆ ಮಿಥಾಲಿ ರಾಜ್‌ ನೇತೃತ್ವದ ವೆಲೋಸಿಟಿ ತಂಡ, ಸೂಪರ್‌ನೋವಾಸ್‌ಗೆ ಪ್ರಬಲ ಪೈಪೋಟಿ ನೀಡುವ ಲೆಕ್ಕಾಚಾರದಲ್ಲಿ ಕಣಕ್ಕಿಳಿಯುತ್ತಿದೆ.

ಪಿಚ್‌ ರಿಪೋರ್ಟ್‌: ಶಾರ್ಜಾ ಪಿಚ್‌ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ನೆರವಾಗಲಿದ್ದು, ಸಮಯ ಕಳೆದಂತೆ ಸ್ಪಿನ್ನರ್‌ಗಳು ವಿಕೆಟ್‌ ಪಡೆಯಲಿದ್ದಾರೆ. ಟಾಸ್‌ ಪ್ರಮುಖ ಪಾತ್ರವಹಿಸಲಿದೆ.

ಸಂಭವನೀಯ ಆಟಗಾರ್ತಿಯರ ಪಟ್ಟಿ

ಸೂಪರ್‌ನೋವಾಸ್‌: ಹರ್ಮನ್‌ಪ್ರೀತ್‌ (ನಾಯಕಿ), ಜೆಮಿಮಾ, ಚಾಮರಿ, ಪ್ರಿಯಾ, ಅನುಜಾ, ರಾಧಾ, ತಾನಿಯಾ, ಆರುಂಧತಿ, ಪೂಜಾ, ಶಶಿಕಲಾ, ಶಕೆರಾ.

ವೇಲೋಸಿಟಿ: ಮಿಥಾಲಿ (ನಾಯಕಿ), ವೇದಾ, ಶಫಾಲಿ, ಸುಷ್ಮಾ, ಏಕ್ತಾ ಬಿಶ್ತ್, ಶಿಖಾ ಪಾಂಡೆ, ಕಸ್ಪರೆಕ್‌, ಡೇನಿಯಲ್‌ ವೇಟ್‌, ಮಾನ್ಸಿ, ಸನ್ನೆ ಲಸ್‌, ದೇವಿಕಾ.

ಸ್ಥಳ: ಶಾರ್ಜಾ 
ಆರಂಭ: ರಾತ್ರಿ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್