ಶಾರ್ಜಾ(ಅ.17): ಐಪಿಎಲ್ 2020 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಿಂದಿನ ಎಲ್ಲಾ ಆವೃತ್ತಿಗಳಿಂದ ಉತ್ತಮ ಪ್ರದರ್ಶನ ನೀಡುತ್ತಿದೆ. ಇದೀಗ ರಾಜಸ್ಥಾನ ರಾಯಲ್ಸ್ ವಿರುದ್ಧದ ಲೀಗ್ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಆರ್‌ಸಿಬಿ 7 ವಿಕೆಟ್ ಗೆಲುವು ಕಂಡಿದೆ.

22 ಎಸೆತದಲ್ಲಿ 55ರನ್ ಸಿಡಿಸಿ ಗೆಲುವಿನ ಜೊತೆಗೆ ದಾಖಲೆ ಬರೆದ ಎಬಿಡಿ!.

ಎಬಿ ಡಿವಿಲಿಯರ್ಸ್ 22 ಎಸೆತದಲ್ಲಿ ಅಜೇಯ 55 ರನ್ ಸಿಡಿಸಿದ್ದಾರೆ. ಈ ಮೂಲಕ ಕಡಿಮೆ ಎಸೆತದಲ್ಲಿ ಹಾಫ್ ಸೆಂಚುರಿ ದಾಖಲಿಸಿದ್ದಾರೆ. ಇನ್ನೇನು ರಾಜಸ್ಥಾನ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ ಅನ್ನುವಷ್ಟರಲ್ಲೇ ಎಬಿಡಿ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿದರು. 6 ಸಿಕ್ಸರ್ ಮೂಲಕ ರಾಜಸ್ಥಾನ ಕೈಯಲ್ಲಿದ್ದ ಗೆಲುವನ್ನು ಎಬಿಡಿ ಕಸಿದುಕೊಂಡರು.

ಎಬಿಡಿ ಪ್ರದರ್ಶನದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಮ್ಸ್ ಹರಿದಾಡುತ್ತಿದೆ. ಇದರಲ್ಲಿ ಅತ್ಯುತ್ತಮ 10 ಮೇಮ್ಸ್ ಇಲ್ಲಿವೆ.