ಶಾರ್ಜಾ(ನ.01): ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ 13ನೇ ಆವೃತ್ತಿಯಲ್ಲಿ ಮೊದಲ ತಂಡವಾಗಿ ಟೂರ್ನಿಯಿಂದ ಹೊರಬಿದ್ದಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಈ ವರ್ಷದ ಪಯಣ ಅಂತ್ಯಗೊಳಿಸಿದ ಸಿಎಸ್‌ಕೆ ಮುಂದಿನ ಐಪಿಎಲ್ ಟೂರ್ನಿಗೆ ತಯಾರಿ ನಡೆಸುತ್ತಿದೆ. ಮುಂದಿನ ಐಪಿಎಲ್ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್ ಸಂಪೂರ್ಣ ತಂಡವನ್ನು ಬದಲಿಸುವ ಸೂಚನೆ ನೀಡಿದೆ.

ಪಂಜಾಬ್‌ ಪ್ಲೇ ಆಫ್‌ ಕನಸು ಛಿದ್ರ; ಧೋನಿ ಪಡೆ ಐಪಿಎಲ್ ಟೂರ್ನಿಗೆ ಗೆಲುವಿನ ವಿದಾಯ..!...

ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ ಇದೀಗ ಮುಂದಿನ ವರ್ಷದ ಐಪಿಎಲ್ ಟೂರ್ನಿಗೆ ಸಿಎಸ್‌ಕೆ ತಯಾರಿ ಕುರಿತ ಮಾಹಿತಿ ಬಿಚ್ಚಿಟ್ಟಿದ್ದಾರೆ. ಹರಾಜಿನಲ್ಲಿ ಹಲವು ಆಟಗಾರರನ್ನೂ ಖರೀದಿಸಿದರೂ ಚೆನ್ನೈ ತಂಡದಲ್ಲಿನ ಮೂಲ ಆಟಗಾರರನ್ನು ಉಳಿಸಿಕೊಂಡಿದೆ. ಇದೀಗ ಮೂಲ ಆಟಗಾರರನ್ನೇ ಬದಲಿಸುವ ಕುರಿತು ಧೋನಿ ಸೂಚನೆ ನೀಡಿದ್ದಾರೆ.

ಕೇವಲ ಆಟಗಾರರನ್ನು ಮಾತ್ರವಲ್ಲ, ನಾಯಕತ್ವ ಬದಲಾವಣೆ ಕುರಿತು ಸೂಚನೆ ನೀಡಿದ್ದಾರೆ. ಮುಂದಿನ ಪೀಳಿಗೆಗೆ ತಂಡವನ್ನು ನೀಡಬೇಕಿದೆ. ಯುವ ಕ್ರಿಕೆಟಿಗರಿಗೆ ಜವಾಬ್ದಾರಿ ನೀಡಲು ಧೋನಿ ರೆಡಿಯಾಗಿದ್ದಾರೆ. 

13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಧೋನಿ ಸೈನ್ಯ 14 ಲೀಗ್ ಪಂದ್ಯದಲ್ಲಿ ಕೇವಲ 6 ಗೆಲುವು ಕಂಡಿದೆ. ಈ ಮೂಲಕ 12 ಅಂಕ ಸಂಪಾದಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ನಿರೀಸ ಪ್ರದರ್ಶನ ನೀಡಿದ ಸಿಎಸ್‌ಕೆ ಐಪಿಎಲ್ ಇತಿಹಾಸದಲ್ಲೇ ಪ್ಲೇ ಆಫ್ ಪ್ರವೇಶಿಸಿದೆ ಟೂರ್ನಿಯಿಂದ ಹೊರಬಿದ್ದಿದೆ.