Asianet Suvarna News Asianet Suvarna News

RCBಗೆ ಕನ್ನಡಿಗನಿಂದ ಈ ಸಲ ಕಪ್ ನಮ್ದೆ ಆ್ಯಂಥಮ್ ಸಾಂಗ್!

ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಇದರ ನಡುವೆ ಆರ್‌ಸಿಬಿ ಅಭಿಮಾನಿ ರಚಿಸಿ ಹಾಡಿರುವ ಈ ಸಲ ಕಪ್ ನಮ್ದೆ ಹಾಡು ಇದೀಗ ವೈರಲ್ ಆಗಿದೆ. ಆರ್‌ಸಿಬಿಗಾಗಿ ಅರ್ಪಿಸಿರುವ ಈ ಹಾಡು ಹೇಗಿದೆ. ಇಲ್ಲಿದೆ ಕೇಳಿ. 

RCB Bengaluru fan dedicate e sala cup namde anthem song to Kohli team ckm
Author
Bengaluru, First Published Oct 3, 2020, 8:24 PM IST
  • Facebook
  • Twitter
  • Whatsapp

ಬೆಂಗಳೂರು(ಅ.03): 13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಈ ಹಿಂದಿನ ಆವೃತ್ತಿಗಳಲ್ಲಿ ಈ ಸಲ ಕಪ್ ನಮ್ದೆ ಸ್ಲೋಗನ್ ಆರ್‌ಸಿಬಿ ತಂಡವನ್ನು ಟ್ರೋಲ್ ಮಾಡಲು ಬಳಕೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಇತರ ತಂಡಗಳಿಗೆ ಕಪ್ ಕೈಜಾರಿ ಆರ್‌ಸಿಬಿ ಕೈಸೇರುತ್ತೋ ಅನ್ನೋ ಭಯ ಶುರುವಾಗಿದೆ. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿ ಕೀರ್ತಿ ವರ್ಮಾ ಈ ಸಲ ಕಪ್ ನಮ್ದೆ ಸಾಂಗ್ ಡಿಡಿಕೇಟ್ ಮಾಡಿದ್ದಾರೆ.

ಪಡಿಕ್ಕಲ್ ಅಬ್ಬರ; ರಾಜಸ್ಥಾನ ವಿರುದ್ಧ ಬೆಂಗಳೂರು ಭರ್ಜರಿ ಜಯಭೇರಿ
 
ಮಾಲೂರಿನ ಕೀರ್ತಿ ವರ್ಮಾ ಅನ್ನೋ ಆರ್ ಸಿಬಿ ಮತ್ತು ಕನ್ನಡದ ಅಭಿಮಾನಿ ಈ ಸಾಂಗ್ ಬರೆದು, ಮ್ಯೂಸಿಕ್ ಕಂಪೋಸ್ ಮಾಡಿ ತಾನೇ ಹಾಡಿ ಕುಣಿದಿದ್ದಾನೆ.‌ ಸಾಮಾಜಿಕ ಜಾಲತಾಣಲ್ಲಿ ಈ ಹಾಡು ವೈರಲ್ ಆಗಿದೆ.

 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸೋ ಮೂಲಕ ಇದೀಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಆಕ್ರಮಿಸಿಕೊಂಡಿದೆ. ಆಡಿದ 4 ಪಂದ್ಯದಲ್ಲಿ 3 ಗೆಲುವು ಸಾಧಿಸಿ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

"

Follow Us:
Download App:
  • android
  • ios