ದುಬೈ(ನ.06): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಅನಾಯಾಸವಾಗಿ ಮಣಿಸಿ ಫೈನಲ್ ಪ್ರವೇಶಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ 2 ತಂಡಗಳ ಆಟಗಾರರ ಪ್ರದರ್ಶನಕ್ಕಿಂತ ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಒಳಗಾಗಿದ್ದು, ಮುಂಬೈ ಇಂಡಿಯನ್ಸ್ ಬೆಂಬಲಿಸುವ ಲಕ್ಕಿ ಆಂಟಿಯ ಬಗ್ಗೆ. ಹೌದು, ಈ ಹಿಂದೆ ಮುಂಬೈ ಇಂಡಿಯನ್ಸ್ ಗೆಲ್ಲಲಿ ಎಂದು ಸ್ಟೇಡಿಯಂನಲ್ಲಿ ಕಣ್ಣು ಪ್ರಾರ್ಥಿಸಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಆ ಆಂಟಿ ಇದೀಗ ವಿದೇಶದಲ್ಲಿ ಐಪಿಎಲ್ ನಡೆಯುತ್ತಿದ್ದರೂ ಅಲ್ಲಿಗೂ ತೆರಳಿ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸಿದ್ದು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಮಹಿಳೆ 2017ರ ಐಪಿಎಲ್ ಟೂರ್ನಿಯ ಮುಂಬೈ ಇಂಡಿಯನ್ಸ್ ಹಾಗೂ ಪುಣೆ ಸೂಪರ್‌ಜೈಂಟ್ ನಡುವಿನ ಫೈನಲ್ ಪಂದ್ಯದ ವೇಳೆ ಮೊದಲು ಕಾಣಿಸಿಕೊಂಡಿದ್ದರು. ಅಂತಿಮ 5 ಎಸೆತಗಳಲ್ಲಿ ಪುಣೆ ಗೆಲ್ಲಲು ಕೇವಲ 7 ರನ್‌ಗಳ ಅಗತ್ಯವಿತ್ತು. ಈ ರೋಚಕ ಕ್ಷಣವನ್ನು ವೀಕ್ಷಿಸದೇ ಕಣ್ಮುಚ್ಚಿ ದೇವರಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಲಿ ಎಂದು ಪ್ರಾರ್ಥನೆ ಮಾಡಿದ್ದರು. ಆ ಬಳಿಕ ಮುಂಬೈ ಇಂಡಿಯನ್ಸ್ ಆ ಪಂದ್ಯವನ್ನು ರೋಚಕವಾಗಿ ಗೆದ್ದು ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ದಿನಬೆಳಗಾಗುವುದರೊಳಗಾಗಿ ಈ ಆಂಟಿಯೂ ಸಿಕ್ಕಾಪಟ್ಟೆ ಫೇಮಸ್ ಆಗಿ ಬಿಟ್ಟರು.

ಡೆಲ್ಲಿ ಸೋಲಿಸಿ IPL 2020 ಫೈನಲ್ ಪ್ರವೇಶಿಸಿದ ಮುಂಬೈ!

ಈ ಆಂಟಿ ಬೇರ್ಯಾರು ಅಲ್ಲ ಮುಂಬೈ ಇಂಡಿಯನ್ಸ್ ಒಡತಿ ನೀತ ಅಂಬಾನಿ ತಾಯಿ ಪೂರ್ಣಿಮಾ ದಲಾಲ್ ಎಂದು ಅಭಿಷೇಕ್ ಬಚ್ಚನ್ ಈ ಹಿಂದೆಯೇ ಈ ಕುತೂಹಲಕ್ಕೆ ತೆರೆ ಎಳೆದಿದ್ದರು. ಈ ಆಂಟಿಯ ಆಗಮನ ಮುಂಬೈ ಇಂಡಿಯನ್ಸ್ ಪಾಲಿಗೆ ಮತ್ತೊಮ್ಮೆ ಅದೃಷ್ಟ ತಿರುಗುವಂತೆ ಮಾಡಿದೆ. ಪೂರ್ಣಿಮಾ ದಲಾಲ್ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ ಬಗ್ಗೆ ಟ್ವಿಟರಿಗರು ಏನಂದ್ರು ಅನ್ನೋದನ್ನು ನೀವೇ ನೋಡಿ...