ದುಬೈ(ಆ.26): 6 ದಿನ​ಗಳ ಕ್ವಾರಂಟೈನ್‌ನಲ್ಲಿ​ರುವ ಹಾಲಿ ಐಪಿ​ಎಲ್‌ ಚಾಂಪಿಯನ್‌ ಮುಂಬೈ ಇಂಡಿ​ಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ, ಹೋಟೆಲ್‌ ಕೊಠ​ಡಿ​ಯಲ್ಲೇ ಫಿಟ್ನೆಸ್‌ ಅಭ್ಯಾಸ ನಡೆ​ಸು​ತ್ತಿದ್ದು, ಅವ​ರಿಗೆ ಪತ್ನಿ ರಿತಿಕಾ ಸಾಥ್‌ ನೀಡಿ​ದ್ದಾರೆ. 

ಇದೀಗ ರೋಹಿತ್ ಶರ್ಮಾ ಹಾಗೂ ಪತ್ನಿ ರಿತಿಕಾ ಒಟ್ಟಿಗೆ ಫಿಟ್ನೆಸ್‌ ಅಭ್ಯಾಸ ನಡೆ​ಸು​ತ್ತಿ​ರುವ ವಿಡಿ​ಯೋ​ವನ್ನು ರೋಹಿತ್‌ ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದು, ವಿಡಿಯೋ ವೈರಲ್‌ ಆಗಿದೆ. 

 
 
 
 
 
 
 
 
 
 
 
 
 

Stronger together 💙

A post shared by Rohit Sharma (@rohitsharma45) on Aug 25, 2020 at 1:14am PDT

ಈ ವಿಡಿ​ಯೋಗೆ ಪ್ರತಿಕ್ರಿಯಿ​ಸಿ​ರುವ ಆರ್‌ಸಿಬಿ ಸ್ಪಿನ್ನರ್‌ ಯಜು​ವೇಂದ್ರ ಚಹಲ್‌, ‘ಪತ್ನಿ ಜೊತೆ ಐಪಿ​ಎಲ್‌ನಲ್ಲಿ ಇನ್ನಿಂಗ್ಸ್‌ ಆರಂಭಿಸುತ್ತೀರಾ?’ ಎಂದು ರೋಹಿತ್‌ರ ಕಾಲೆ​ಳೆ​ದಿ​ದ್ದಾರೆ.

ಐಪಿಎಲ್ ಇತಿಹಾಸದಲ್ಲಿ 4 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ತಂಡ ಮಿಲಿಯನ್ ಡಾಲರ್ ಟೂರ್ನಿಯಲ್ಲೇ ಅತ್ಯಂತ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ. ಇದೀಗ ರೋಹಿತ್ ಪಡೆ ಮತ್ತೊಂದು ಐಪಿಎಲ್ ಕಪ್‌ ಮೇಲೆ ಕಣ್ಣಿಟ್ಟಿದೆ. 2019ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಓವರ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಕೇವಲ ಒಂದು ರನ್‌ನಿಂದ ರೋಚಕವಾಗಿ ಮಣಿಸಿ ದಾಖಲೆಯ 4ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಮೆರೆದಾಡಿತ್ತು.

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಎಲ್ಲಾ 8 ತಂಡಗಳು ಈಗಾಗಲೇ ದುಬೈ ತಲುಪಿವೆ. 8 ತಂಡಗಳ ಆಟಗಾರರು, ಸಹಾಯಕ ಸಿಬ್ಬಂದಿ ತಮ್ಮ ತಮ್ಮ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿದ್ದು, ಕೊರೋನಾ ಟೆಸ್ಟ್‌ಗೆ ಒಳಗಾಗಿದ್ದಾರೆ. ಬಹುನಿರೀಕ್ಷಿತ 2020ನೇ ಸಾಲಿನ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ. ಯುಎಇನ ಶಾರ್ಜಾ, ದುಬೈ ಹಾಗೂ ಅಬುದಾಬಿಯಲ್ಲಿ ಈ ಬಾರಿಯ ಐಪಿಎಲ್ ಪಂದ್ಯಾವಳಿಗಳು ನಡೆಯಲಿವೆ.