Asianet Suvarna News Asianet Suvarna News

ಕೊಳಗೇರಿ ಹುಡುಗನ ಬೌಲಿಂಗ್‌ಗೆ ಕೆಕೆಆರ್‌ ತತ್ತರ!

IPLನಲ್ಲಿ ಆರ್​ಸಿಬಿ ಬೌಲರ್​ ಮೊಹಮ್ಮದ್ ಸಿರಾಜ್​ ದಾಖಲೆ| ಕೊಳಗೇರಿ ಹುಡುಗನ ಬೌಲಿಂಗ್‌ಗೆ ಕೆಕೆಆರ್‌ ತತ್ತರ| ಟ್ರೋಲ್‌ ಮಾಡುತ್ತಿದ್ದವರ ಬಾಯಿ ಮುಚ್ಚಿಸಿದ ಸಿರಾಜ್

Mohammed Siraj On Magical Match Winning Performance vs KKR pod
Author
Bangalore, First Published Oct 22, 2020, 11:45 AM IST

ಯುಎಎಇ(ಅ.22): IPLನಲ್ಲಿ ಆರ್​ಸಿಬಿ ಬೌಲರ್​ ಮೊಹಮ್ಮದ್ ಸಿರಾಜ್​ ದಾಖಲೆ ಬರೆದಿದ್ದಾರೆ. ಪವರ್​ ಪ್ಲೇನಲ್ಲಿ ಎರಡು ಮೇಡಿನ್ ಓವರ್​ ಆಡಿ ಮೂರು ವಿಕೆಟ್​ ಕಬಳಿಸಿದ್ದಾರೆ. ಈ ಮೂಲಕ ಟ್ರೋಲಿಗರಿಗೆ ತನ್ನ ಆಟದಿಂದಲೇ ಉತ್ತರಿಸಿದ್ದಾರೆ. ಸಿರಾಜ್​ ಈ ಹಂತಕ್ಕೆ ಬಂದು ನಿಲ್ಲಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಹೈದರಾಬಾದ್​ನ ಕೊಳಗೇರಿಯಿಂದ ಬಂದ ಅವರು ಈಗ ಹೊಸ ದಾಖಲೆ ಬರೆದಿದ್ದಾರೆ.

"

ಆರ್​ಸಿಬಿಗೆ ದೊಡ್ಡ ಮೊತ್ತದ ಟಾರ್ಗೆಟ್​ ನೀಡಬೇಕೆಂಬ ಗುರಿಯೊಂದಿಗೆ ಕೆಕೆಆರ್‌​ ತಂಡ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತ್ತು. ಹೀಗಿರುವಾಗ ಇತ್ತ ಮೊಹಮದ್​ ಸಿರಾಜ್​ ಮೊದಲ ಓವರ್​ಗೆ ಇಳಿದಾಗಂತೂ ರನ್​ ಹೊಳೆ ಹರಿಸಬಹುದು ಎಂದೇ ಕೆಕೆಆರ್​ ಬ್ಯಾಟ್ಸ್​​ಮನ್​ಗಳು ಅಂದುಕೊಂಡಿದ್ದರ. ಆದರೆ ಉತ್ಸಾಹ ಕೆಲವೇ ನಿಮಿಷಗಳಲ್ಲಿ ಮಾಯವಾಗಿತ್ತು. ಕೆಕೆಆರ್​ ಬ್ಯಾಟ್ಸ್​ಮನ್​ಗಳಿಗೆ ಸಿರಾಜ್​ ಅಕ್ಷರಶಃ ದುಸ್ವಪ್ನವಾಗಿ ಕಾಡಿ ಬಿಟ್ಟಿದ್ದರು.

ಎರಡನೇ ಓವರ್​ಗೆ ಬೌಲಿಂಗ್​ಗೆ ಇಳಿದ ಸಿರಾಜ್​ ಯಾವುದೇ ರನ್​ ನೀಡದೆ ಎರಡು ವಿಕೆಟ್​ ಕಿತ್ತಿದ್ದರು. ನಾಲ್ಕನೇ ಓವರ್​ನಲ್ಲಿ ಮತ್ತೆ ಬೌಲಿಂಗ್​ಗೆ ಇಳಿದ ಅವರು ಮೇಡಿನ್​ ಓವರ್​ ಮಾಡಿ ಮತ್ತೊಂದು ವಿಕೆಟ್​ ಕಬಳಿಸಿದರು. ಆ ಮೂಲಕ ಹೊಸ ದಾಖಲೆ ಬರೆದರು.

ಸಿರಾಜ್​ ತುಂಬಾನೇ ಕಷ್ಟದ ದಿನವನ್ನು ನೋಡಿ ಬಂದವರು. ಅವರ ತಾಯಿ ಅನಕ್ಷರಸ್ಥೆ. ತಂದೆ ಆಟೋ ಚಾಲಕ. ಬಡತನ ಎಂಬುದು ಸಿರಾಜ್​ ಹುಟ್ಟಿದಾಗಿನಿಂದಲೂ ಅವರಿಗೆ ಅಂಟಿಕೊಂಡೇ ಇತ್ತು. ನಂತರ ಅವರ ಬದುಕು ಬದಲಾಗಿದ್ದು, ಆರ್​​ಸಿಬಿ ಸಿರಾಜ್​ ಅವರನ್ನು ತಂಡಕ್ಕೆ ಸೇರಿಸಿಕೊಂಡ ಮೇಲೆಯೇ. ಕೊಹ್ಲಿ ನಾಯಕತ್ವದಲ್ಲಿ ಐಪಿಎಲ್​ ಆಡಿದ ಮೇಲೆ ಸಿರಾಜ್​ ಭಾರತ ತಂಡ ಪ್ರತಿನಿಧಿಸಿದ್ದರು.  ಆರ್​ಸಿಬಿ ಸೇರಿದ ನಂತರವೇ ಸಿರಾಜ್​ ಹೈದರಾಬಾದ್​ನಲ್ಲಿ ಹೊಸ ಮನೆ ಖರೀದಿಸಿದ್ದು.

ಒಂದು ಕೊಳಗೇರಿಯಿಂದ ಬಂದು ಸಿರಾಜ್​ ಇಂದು ಈ ರೀತಿಯ ದಾಖಲೆ ಬರೆದಿದ್ದಾರೆ. ಅವರನ್ನು ನೋಡಿ ಟ್ರೋಲ್​ ಮಾಡುತ್ತಿದ್ದವರು ಹೊಗಳುತ್ತಿದ್ದಾರೆ. ಅವರ ಬೌಲಿಂಗ್​ ಹಿಗೆಯೇ ಮುಂದುವರಿಯಲಿ ಅನ್ನೋದು ಎಲ್ಲರ ಆಶಯ.

Follow Us:
Download App:
  • android
  • ios