ಅಬು ಧಾಬಿ(ಅ.25):  ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅಲಭ್ಯರಾಗಿದ್ದಾರೆ. ರೋಹಿತ್ ಶರ್ಮಾಗೆ ಇಂಜುರಿ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಕಳೆದೆರಡು ಪಂದ್ಯದಿಂದ ರೋಹಿತ್ ವಿಶ್ರಾಂತಿಗೆ ಜಾರಿದ್ದಾರೆ. ಆದರೆ ಟೂರ್ನಿ ರೋಚಕ ಘಟ್ಟ ತಲುಪುತ್ತಿದ್ದಂತೆ ರೋಹಿತ್ ಶರ್ಮಾ ಅಲಭ್ಯತೆ ತಂಡದ ಜೊತೆಗೆ ಅಭಿಮಾನಿಗಳ ಚಿಂತೆಗೂ ಕಾರಣವಾಗಿದೆ.

ಮ್ಯಾನೇಜರ್‌ನನ್ನೇ ಪ್ರೀತಿಸಿ ಫಿಲ್ಮೀ ಸ್ಟೈಲಲ್ಲಿ ಪ್ರಪೋಸ್‌ ಮಾಡಿದ ಕ್ರಿಕೆಟಿಗ!..

ರೋಹಿತ್ ಶರ್ಮಾ ಇಂಜುರಿ ಕುರಿತು ಸಹ ಆಟಗಾರ ಕ್ವಿಂಟನ್ ಡಿಕಾಕ್ ಮಾಹಿತಿ ನೀಡಿದ್ದಾರೆ. ರೋಹಿತ್ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ತಂಡಕ್ಕೆ ಕಮ್‌ಬ್ಯಾಕ್ ಮಾಡಲಿದ್ದಾರೆ. ಆದರೆ ಮುಂದಿನ ಪಂದ್ಯಕ್ಕೆ ಲಭ್ಯವಾಗಿದ್ದಾರಾ ಅನ್ನೋ ಮಾಹಿತಿ ಸದ್ಯಕ್ಕೆ ತಿಳಿದಿಲ್ಲ ಎಂದು ಡಿಕಾಕ್ ಹೇಳಿದ್ದಾರೆ.

ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಮುಂಬೈ ತಂಡವನ್ನು ಕೀರನ್ ಪೋಲಾರ್ಡ್ ಮುನ್ನಡೆಸುತ್ತಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಪೋಲಾರ್ಡ್ ನಾಯಕತ್ವದ ಮುಂಬೈ ಇಂಡಿಯನ್ಸ್ 10 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತ್ತು.