ಮ್ಯಾನೇಜರ್‌ನನ್ನೇ ಪ್ರೀತಿಸಿ ಫಿಲ್ಮೀ ಸ್ಟೈಲಲ್ಲಿ ಪ್ರಪೋಸ್ ಮಾಡಿದ ಕ್ರಿಕೆಟಿಗ!
ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ರೋಹಿತ್ ಶರ್ಮಾ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಅಗಿದ್ದಾರೆ. ಟೀಂ ಇಂಡಿಯಾದ ಆರಂಭಿಕ ಆಟಗಾರ. ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ನಡುವೆ ಬುಧವಾರ ನಡೆದ ಪಂದ್ಯದಲ್ಲಿ ಮುಂಬೈ 49 ರನ್‌ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ ಅದ್ಭುತ ಇನ್ನಿಂಗ್‌ಗಾಗಿ 'ಮ್ಯಾನ್ ಆಫ್ ದಿ ಮ್ಯಾಚ್' ಆವಾರ್ಡ್ ಪಡೆದರು. ಆಟದಂತೆ ಇವರ ಪರ್ಸನಲ್ ಲೈಫ್ ಸಹ ಇಂಟರೆಸ್ಟಿಂಗ್. ತನ್ನ ಮ್ಯಾನೇಜರ್ ಆಗಿದ್ದ ರಿತಿಕಾಳನ್ನು ಪ್ರೀತಿಸಿ ಮದುವೆಯಾಗಿದ್ದಾರೆ ರೋಹಿತ್.

20ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ವೃತ್ತಿ ಜೀವನ ಪ್ರಾರಂಭಿಸಿದ ರೋಹಿತ್ ಶರ್ಮಾ ಇಂದು ವಿಶ್ವದ ಅಗ್ರ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು.
.

ಐಪಿಎಲ್‌ನಲ್ಲೂ ಮುಂಬೈ ಇಂಡಿಯನ್ಸ್ ತಂಡವು ಅವರ ನಾಯಕತ್ವದಲ್ಲಿ 4 ಬಾರಿ ಪ್ರಶಸ್ತಿ ಗೆದ್ದಿದೆ.
ಐಪಿಎಲ್‌ನ 13ನೇ ಸೀಸನ್ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋತರೂ, ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಕೆಕೆಆರ್ ತಂಡವನ್ನು ಮಣಿಸಿದೆ.
ಐಪಿಎಲ್ 2020 ಪ್ರಾರಂಭವಾಗುವ ಮೊದಲು ರೋಹಿತ್ ಅವರ ಕುಟುಂಬದೊಂದಿಗೆ ದುಬೈ ಬೀಚ್‌ನಲ್ಲಿ ರಿಲಾಕ್ಸ್ ಆಗಿ ಕಾಲ ಕಳೆದ ಫೋಟೋಗಳು ವೈರಲ್ ಆಗಿದ್ದವು.
ರೋಹಿತ್ ಪತ್ನಿ ರಿತಿಕಾ ಮತ್ತು ಮಗಳು ಅದಾರಾ ಜೊತೆ ಯುಎಇಯಲ್ಲಿದ್ದಾರೆ.
ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ದೇ ಲವ್ ಸ್ಟೋರಿ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ಈ ಹಿಂದೆ ರೋಹಿತ್‌ರ ಮ್ಯಾನೇಜರ್ ಆಗಿದ್ದ ರಿತಿಕಾ ಈಗ ಹೆಂಡತಿಯಾಗಿದ್ದಾರೆ.
ರೋಹಿತ್ ಮತ್ತು ರಿತಿಕಾ ಭೇಟಿಯಾಗಿದ್ದು ಪ್ರೋಫೆಷನಲ್ ಆಗಿ.
ರಿತಿಕಾ ಸ್ಪೋರ್ಟ್ಸ್ ಈವೆಂಟ್ ಮ್ಯಾನೇಜರ್ ಆಗಿದ್ದರು ಮತ್ತು ಅವರು ರೋಹಿತ್‌ರ ಕ್ರಿಕೆಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು. ಈ ಸಮಯದಲ್ಲಿ ಇಬ್ಬರೂ ಸ್ನೇಹಿತರಾದರು. ಸ್ನೇಹ ಪ್ರೀತಿಯಾಗಿ ಬದಲಾಯಿತು ನಂತರ ಮದುವೆಯಾಗಲು ನಿರ್ಧರಿಸಿದರು.
ರೋಹಿತ್ ಮತ್ತು ರಿತಿಕಾ ಪ್ರೇಮಕಥೆಯು ಸಂಪೂರ್ಣವಾಗಿ ಫಿಲ್ಮಿ ಆಗಿದೆ. ಶರ್ಮಾ ತಮ್ಮ ಭಾವಿ ಪತ್ನಿಯನ್ನು ಬಾಲಿವುಡ್ ಶೈಲಿಯಲ್ಲಿ ಪ್ರಪೋಸ್ ಮಾಡಿದ್ದರು.
ಮುಂಬೈನ ಬೊರಿವಾಲಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಮೊಣಕಾಲುಗಳ ಮೇಲೆ ಕುಳಿತು ಕೈಯಲ್ಲಿ ಉಂಗುರವನ್ನು ಹಿಡಿದು ರೋಹಿತ್ ರಿತಿಕಾಗೆ ಪ್ರಪೋಸ್ ಮಾಡಿದರು. ರಿತಿಕಾ ತಕ್ಷಣ ರೋಹಿತ್ ಪ್ರಸ್ತಾಪವನ್ನು ಒಪ್ಪಿಕೊಂಡರು.
ರೋಹಿತ್ ಮತ್ತು ರಿತಿಕಾ 13 ಡಿಸೆಂಬರ್ 2015 ರಂದು ಮದುವೆಯಾದರು. ಅವರ ಮದುವೆಯಲ್ಲಿ ಕ್ರಿಕೆಟ್, ಬಾಲಿವುಡ್ ಮತ್ತು ಬ್ಯುಸಿನೆಸ್ ಜಗತ್ತಿನ ಎಲ್ಲಾ ಲೆಂಜೆಂಡ್‌ಗಳು ಭಾಗವಹಿಸಿದ್ದರು.
ಮದುವೆಯಾದ 3 ವರ್ಷಗಳ ನಂತರ ಮಗಳು ಅದಾರಾ ಜನಿಸಿದಳು.

