ಅಬುದಾಬಿ(ಅ. 21)  ಭರ್ಜರಿ ಬೌಲಿಂಗ್ ಪ್ರದರ್ಶನ ಮಾಡಿದ ಆರ್ ಸಿಬಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಕೇವಲ 84 ರನ್ ಗೆ ಕಟ್ಟಿಹಾಕಿದೆ. ಮಾರಕ ಎಸೆತಗಳನ್ನು ಎಸೆದ ಮಹಮದ್ ಸಿರಾಜ್ ಕೋಲ್ಕತ್ತಾದ ಬ್ಯಾಟಿಂಗ್ ಶಕ್ತಿ ಪುಡಿಪುಡಿ ಮಾಡಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತ್ತಾಗೆ ಆರಂಭದಲ್ಲೆ ಸಿರಾಜ್ ಆಘಾತ ನೀಡಿದ್ದರು.  ತಮ್ಮ ವೃತ್ತಿ ಜೀವನ್ ಮೂನ್ನೂರನೇ ಇಯಾನ್ ಮಾರ್ಗನ್ ಒಬ್ಬರನ್ನು ಬಿಟ್ಟರೆ ಯಾರೂ ಪ್ರತಿರೋಧ ತೋರಲಿಲ್ಲ. ಕೊನೆಯಲ್ಲಿ ಪೆರ್ಗೂಸನ್ ಮತ್ತು ಕುಲದೀಪ್ ಯಾದವ್ ತಡೆ ಹಾಕಿ ರನ್ ಗತಿ ಕೊಂಚ ಏರಿಸಿದರು. ನಾಲ್ಕು ಓವರ್  ನಲ್ಲಿ ಕೇವಲ ಎಂಟು ರನ್ ನೀಡಿ ಮೂರು ವಿಕೆಟ್ ಕಿತ್ತ ಸಿರಾಜ್ ಮೊದಲಾರ್ಧದ ಹೀರೋ ಆದರು.

ಮೊದಲಿನಿಂದಲೂ ಆಕ್ರಮಣಕಾರಿ ತಂತ್ರಗಾರಿಗೆ ಪ್ರದರ್ಶನ ಮಾಡಿದ ಆರ್ಸಿಬಿ ಕ್ಷೇತ್ರ ರಕ್ಷಣೆಯಲ್ಲೂ ಹಿಡಿತ ಸಾಧಿಸಿತ್ತು. ಇದೀಗ ತಂಡ ಚೇಸಿಂಗ್ ಗೆ ಇಳಿಯಬೇಕಾಗಿದ್ದು ಎಷ್ಟು ಓವರ್ ನಲ್ಲಿ ಗುರಿ ಮುಟ್ಟಿ ತನ್ನ ರನ್ ರೇಟ್ ಹೆಚ್ಚಳ ಮಾಡಿಕೊಳ್ಳುತ್ತದೆ ನೋಡಬೇಕಿದೆ. ಭಾರೀ ಅಂತರದಲ್ಲಿ ಜಯ ಸಾಧಿಸಿದರೆ ದೆಹಲಿ ಹಿಂದಿಕ್ಕಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ಇದು ಈ ಸೀಸನ್ ನ ಅತಿ ಕಡಿಮೆ ಸ್ಕೋರ್ ಆಗಿದ್ದು ಈ ಹಿಂದೆ ಆರ್ ಸಿಬಿ ಕೆಕೆಆರ್ ಎದುರೆ 49 ರನ್  ದಾಖಲಿಸಿತ್ತು.