ದುಬೈ(ಅ.18):  ಸೂಪರ್ ಸಂಡೆಯ ಎರಡೂ ಪಂದ್ಯ ಟೈನಲ್ಲಿ ಅಂತ್ಯ. ಹೀಗಾಗಿ ಎರಡೂ ಪಂದ್ಯದಲ್ಲಿ ಸೂಪರ್ ಓವರ್ ಮ್ಯಾಚ್. ಆದರೆ 2ನೇ ಪಂದ್ಯದಲ್ಲಿ ಎರಡೆರಡು ಸೂಪರ್ ಓವರ್. ಹೌದು. ಇದು ಅಪರೂಪ. ಮುಂಬೈ ಹಾಗೂ ಪಂಜಾಬ್ ಪಂದ್ಯ ಟೈ ಆದರ ಕಾರಣ, ಸೂಪರ್ ಓವರ್ ಮಾಡಲಾಯಿತು. ಮೊದಲ ಸೂಪರ್ ಕೂಡ ಟೈನಲ್ಲಿ ಅಂತ್ಯಗೊಂಡಿತು. ಹೀಗಾಗಿ 2ನೇ ಸೂಪರ್ ಓವರ್ ಮಾಡಲಾಯಿತು. 

2ನೇ ಸೂಪರ್ ಓವರ್‌ನಲ್ಲಿ ಕೀರನ್ ಪೋಲಾರ್ಡ್ ಅಬ್ಬರಿಸಿದರು. ಹೀಗಾಗಿ ಮುಂಬೈ ಇಂಡಿಯನ್ಸ್ 11 ರನ್ ಸಿಡಿಸಿತು. ಚೇಸ್ ಮಾಡಲು ಕಣಕ್ಕಿಳಿದ ಪಂಜಾಬ್ ತಂಡದ ಕ್ರಿಸ್ ಗೇಲ್ ಸಿಕ್ಸರ್ ಸಿಡಿಸಿದರೆ, ಮಯಾಂಕ್ ಅಗರ್ವಾಲ್ ಬೌಂಡರಿ ಸಿಡಿಸಿದರು. 4ನೇ ಎಸೆತದಲ್ಲಿ ಮಯಾಂಕ್ 1 ರನ್ ಸಿಡಿಸೋ ಮೂಲಕ ಪಂಜಾಬ್ ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಹಾಗೂ ಅತ್ಯಂತ ರೋಚಕ ಗೆಲುವು ದಾಖಲಿಸಿತು.

"

ನಿಯಮ:
ಸೂಪರ್ ಓವರ್‌ನಲ್ಲಿ ಔಟಾದ ಬ್ಯಾಟ್ಸ್‌ಮನ 2ನೇ ಸೂಪರ್ ಓವರ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ
ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಿದ ಆಟಗಾರರು 2ನೇ ಸೂಪರ್ ಓವರ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ

ಸೂಪರ್ ಓವರ್ ರೋಚಕತೆ: 
ಸೂಪರ್ ಓವರ್ ಬ್ಯಾಟಿಂಗ್ ಇಳಿದ ಕೆಎಲ್ ರಾಹುಲ್ ಹಾಗೂ ನಿಕೋಲಸ್ ಪೂರನ್‌ಗೆ ಜಸ್ಪ್ರೀತ್ ಬುಮ್ರಾ ಶಾಕ್ ನೀಡಿದರು. 2ನೇ ಎಸೆತದಲ್ಲಿ ಪೂರನ್ ವಿಕೆಟ್ ಕಬಳಿಸಿದರು. ಅಂತಿಮ ಎಸೆತದಲ್ಲಿ ರಾಹುಲ್ ವಿಕೆಟ್ ಕೈಚೆಲ್ಲಿದರು.ಈ ಮೂಲಕ ಪಂಜಾಬ್ 5 ರನ್ ಸಿಡಿಸಿತು.

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಸೂಪರ್ ಓವರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ದಾಖಲಿಸಿದೆ. 6 ರನ್‌  ಗುರಿ ಪೆಡದ ಮುಂಬೈಗೆ ಮೊಹಮ್ಮದ್ ಶಮಿ ಶಾಕ್ ನೀಡಿದರು. ಅದ್ಬುತ ಬೌಲಿಂಗ್ ಸಂಘಟಿಸಿದರು. ಹೀಗಾಗಿ ಅಂತಿಮ 1 ಎಸೆತದಲ್ಲಿ ಮುಂಬೈ ಗೆಲುವಿಗೆ 2 ರನ್ ಅವಶ್ಯಕತೆ ಇತ್ತು. 2ರನ್ ಪೂರೈಸುವ ವೇಳೆ ರನೌಟ್. ಸೂಪರ್ ಮತ್ತೆ ಟೈ. ಹೀಗಾಗಿ 2ನೇ ಸೂಪರ್ ಮೊರೆ ಹೋಗಲಾಯಿತು. 

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 6 ವಿಕೆಟ್ ನಷ್ಟಕ್ಕೆ 176 ರನ್ ಸಿಡಿಸಿತ್ತು. ಇನ್ನು ಈ ಮೊತ್ತ ಚೇಸ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ 6 ವಿಕೆಟ್ ನಷ್ಟಕ್ಕೆ 176 ರನ್ ಸಿಡಿಸಿ ಪಂದ್ಯ ಟೈ ಮಾಡಿಕೊಂಡಿತು.