ದುಬೈ(ಅ.27):  ವೃದ್ಧಿಮಾನ್ ಸಾಹ ಹಾಗೂ ನಾಯಕ ಡೇವಿಡ್ ವಾರ್ನರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಸನ್‌ರೈಸರ್ಸ್ ಹೈದರಾಬಾದ್, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್  ವಿರುದ್ಧ ಅಬ್ಬರಿಸಿದೆ. ಸ್ಲಾಗ್ ಓವರ್‌ಗಳಲ್ಲಿ ಮನೀಶ್ ಪಾಂಡೆ ಪ್ರದರ್ಶನ ಕೂಡ ಹೈದರಾಬಾದ್ ತಂಡಕ್ಕೆ ನೆರವಾಯಿತು. ಈ ಮೂಲಕ ಹೈದರಾಬಾದ್ 3 ವಿಕೆಟ್ ನಷ್ಟಕ್ಕೆ 219 ರನ್ ಸಿಡಿಸಿದೆ.

ಡೇವಿಡ್ ವಾರ್ನರ್ ಹಾಗೂ ವೃದ್ಧಿಮಾನ್ ಸಾಹ ಆರಂಭಕ್ಕೆ ಡೆಲ್ಲಿ ಬೆಚ್ಚಿ ಬಿದ್ದಿತು. ಕಾರಣ ಅಲ್ಪಮೊತ್ತಕ್ಕೆ ಹೈದರಾಬಾದ್ ತಂಡವನ್ನು ಆಲೌಟ್ ಮಾಡೋ ಲೆಕ್ಕಾಚಾರ ಉಲ್ಟಾ ಆಯಿತು. ವಾರ್ನರ್ ಹಾಗೂ ಸಾಹ ಶತಕದ ಜೊತೆಯಾಟ ನೀಡಿದರು. ವಾರ್ನರ್ ಹಾಗೂ ಸಾಹ ಆಕರ್ಷಕ ಆರ್ಧಶತಕ ಸಿಡಿಸಿ ಮಿಂಚಿದರು.

ವಾರ್ನರ್ 34 ಎಸೆತದಲ್ಲಿ 66 ರನ್ ಸಿಡಿಸಿ ಔಟಾದರು. ಇನ್ನು ವೃದ್ಧಿಮಾನ್ ಸಾಹ 45 ಎಸೆತದಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 87 ರನ್ ಸಿಡಿಸಿ ಔಟಾದರು. ಮನೀಶ್ ಪಾಂಡೆ ಹಾಗೂ ಕೇನ್ ವಿಲಿಯಮ್ಸ್ ಅಂತಿಮ ಹಂತದಲ್ಲಿ ಅಬ್ಬರಿಸಿದರು. 

ಮನೀಶ್ ಪಾಂಡೆ ಅಜೇಯ 44 ರನ್ ಹಾಗೂ ಕೇನ್ ವಿಲಿಯಮ್ಸನ್ ಅಜೇಯ 11 ರನ್ ಸಿಡಿಸಿದರು. ಈ ಮೂಲಕ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ  219 ರನ್ ಸಿಡಿಸಿತು. .