ದುಬೈ(ಅ.04): 13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಲಯ ಕಳೆದುಕೊಂಡಿದ್ದ ಚನ್ನೈ ಸೂಪರ್ ಕಿಂಗ್ಸ್ ಮತ್ತೆ ತನ್ನ ಹಳೇ ಖದರ್‌ಗೆ ಮರಳಿದೆ. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಸಿಎಸ್‌ಕೆ, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅಬ್ಬರಿಸಿದೆ. ಈ ಮೂಲಕ 10 ವಿಕೆಟ್ ಗೆಲುವು ದಾಖಲಿಸಿದೆ. 

ಶೇನ್ ವ್ಯಾಟ್ಸನ್ ಹಾಗೂ ಫಾಫ್ ಡುಪ್ಲೆಸಿಸ್ ಅಬ್ಬರಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಸೋಲಿಗೆ ಶರಣಾಗಿದೆ. ಆರಂಭಿಕ 4 ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಶೇನ್ ವ್ಯಾಟ್ಸನ್ ಭರ್ಜರಿ ಹಾಫ್ ಸೆಂಚುರಿ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಇತ್ತ ಫಾಫ್ ಡುಪ್ಲೆಸಿಸ್ ಕೂಡ ಅರ್ಧಶತಕ ಸಿಡಿಸಿ ಫಾರ್ಮ್ ಮುಂದುವರಿಸಿದ್ದಾರೆ. 

ಗೆಲುವಿಗೆ 179 ರನ್ ಟಾರ್ಗೆಟ್ ಪಡೆದ ಚೆನ್ನೈ ತಂಡಕ್ಕೆ ಯಾವ ಹಂತದಲ್ಲೂ ಆತಂಕ ಎದುರಾಗಲಿಲ್ಲ. ಕಾರಣ ಶೇನ್ ವ್ಯಾಟ್ಸನ್ ಹಾಗೂ ಫಾಫ್ ಡುಪ್ಲೆಸಿಸ್ ಜೊತೆಯಾಟ ಚೆನ್ನೈ ತಂಡದ ಗೆಲುವಿನ ಹಾದಿ ಸುಗಮ ಮಾಡಿತ್ತು. ಪಂಜಾಬ್ ತಂಡ ಅದೆಷ್ಟೇ ಪ್ರಯತ್ನಿಸಿದರೂ ವ್ಯಾಟ್ಸನ್ ಹಾಗೂ ಡುಪ್ಲೆಸಿಸ್ ಜೊತೆಯಾಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ.

ವ್ಯಾಟ್ಸನ್ ಹಾಗೂ ಡುಪ್ಲೆಸಿಸ್ ಜೊತೆಯಾಟ ಚೆನ್ನೈ ಪರ ಗರಿಷ್ಠ ಆರಂಭಿಕರ ಜೊತೆಯಾಟ ಅನ್ನೋ ದಾಖಲೆ ಬರೆಯಿತು.
181* ವ್ಯಾಟ್ಸನ್ - ಡುಪ್ಲೆಸಿಸ್ v ಪಂಜಾಬ್, 2020
159  ಮೈಕ್ ಹಸ್ಸಿ -ವಿಜಯ್ v ಆರ್‌ಸಿಬಿ, 2011
139* ಮೈಕ್ ಹಸ್ಸಿ - ವಿಜಯ್ v ಪಂಜಾಬ್, 2013
134 ವ್ಯಾಟ್ಸನ್ -ರಾಯುಡು v ಹೈದರಾಬಾದ್, 2018

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ವ್ಯಾಟ್ಸನ್ ಅಜೇಯ 83 ರನ್ ಹಾಗೂ ಡುಪ್ಲೆಸಿಸ್ ಅಜೇಯ 87 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 17. 4 ಓವರ್‌ಗಳಲ್ಲಿ ವಿಕೆಟ್ ನಷ್ಟಕ್ಕೆ ವಿಲ್ಲದೆ ಗುರಿ ತಲುಪಿತು. 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.