ಅಬು ಧಾಬಿ(ಅ.18): ಕೋಲ್ಕತಾ ನೈಟ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಹೊಸ ದಾಖಲೆ ಬರೆದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ 5000 ರನ್ ಪೂರೈಸಿದ ಮೊದಲ ವಿದೇಶಿ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದಿನೇಶ್ ಕಾರ್ತಿಕ್ ಏಕಾಏಕಿ ಕೆಕೆಆರ್ ನಾಯಕತ್ವ ತ್ಯಜಿಸಿದ್ದೇಕೆ?.

ಕೆಕೆಆರ್ ವಿರುದ್ಧ 14 ರನ್ ಪೂರೈಸುತ್ತಿದ್ದಂತೆ ಐಪಿಎಲ್ ಟೂರ್ನಿಯಲ್ಲಿ ವಾರ್ನರ್ 5,000 ರನ್ ದಾಖಲೆ ಬರೆದರು. ಈ ಮೂಲಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಾಲಿಗೆ ಸೇರಿಕೊಂಡಿದ್ದಾರೆ.

6 ಪಂದ್ಯ ಸೋತಿರುವ ಧೋನಿ ಸೈನ್ಯಕ್ಕೆ ಇನ್ನೂ ಇದೆ ಪ್ಲೇ ಆಫ್ ಸ್ಥಾನಕ್ಕೇರುವ ಅವಕಾಶ!..

ಐಪಿಎಲ್ ಟೂರ್ನಿಯಲ್ಲಿ 5,000 ರನ್ ಸಿಡಿಸಿದ ಕ್ರಿಕೆಟಿಗರು:
5759 ವಿರಾಟ್ ಕೊಹ್ಲಿ
5368 ಸುರೇಶ್ ರೈನಾ
5149 ರೋಹಿತ್ ಶರ್ಮಾ
5000* ಡೇವಿಡ್ ವಾರ್ನರ್