Asianet Suvarna News Asianet Suvarna News

IPL 2020: ಆರ್‌ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹೈವೋಲ್ಟೇಜ್ ಫೈಟ್

13ನೇ ಐಪಿಎಲ್ ಟೂರ್ನಿಯ ಆರ್‌ಸಿಬಿ ಪಾಲಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

IPL 2020 Virat Kohli Led RCB takes on Delhi Capitals in Abu Dhabi match Preview kvn
Author
Abu Dhabi - United Arab Emirates, First Published Nov 2, 2020, 9:19 AM IST

ಅಬು​ಧಾ​ಬಿ(ಅ.02): ರಾಯಲ್‌ ಚಾಲೆಂಜ​ರ್ಸ್ ಬೆಂಗ​ಳೂರು ಹಾಗೂ ಡೆಲ್ಲಿ ಕ್ಯಾಪಿ​ಟಲ್ಸ್‌ ಐಪಿ​ಎಲ್‌ ಪ್ಲೇ-ಆಫ್‌ಗೇರಲು ಸೋಮ​ವಾರ ಇಲ್ಲಿ ಜಿದ್ದಾ​ಜಿದ್ದಿ ನಡೆ​ಸ​ಲಿವೆ. ಉಭಯ ತಂಡ​ಗ​ಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯ. ಪ್ಲೇ-ಆಫ್‌ಗೂ ಮುನ್ನ ಇದೊಂದು ರೀತಿ ಕ್ವಾರ್ಟರ್‌ ಫೈನಲ್‌ನಂತಾ​ಗಿದೆ.

ಡೆಲ್ಲಿ ಸತತ 4 ಪಂದ್ಯಗ​ಳಲ್ಲಿ ಸೋಲುಂಡಿ​ದ್ದರೆ, ಆರ್‌ಸಿಬಿ ಸತತ 3 ಸೋಲು ಅನು​ಭ​ವಿ​ಸಿದೆ. ಹೀಗಾಗಿ, ಎರಡೂ ತಂಡಗಳು ಒತ್ತಡದಲ್ಲಿವೆ. ಎರಡೂ ತಂಡ​ಗಳು ತಲಾ 14 ಅಂಕ ಗಳಿ​ಸಿವೆ. ಗೆಲ್ಲುವ ತಂಡ ಪ್ಲೇ-ಆಫ್‌ಗೇರು​ವು​ದ​ರೊಂದಿಗೆ ಅಂಕ​ಪ​ಟ್ಟಿ​ಯಲ್ಲಿ ಅಗ್ರ 2ರಲ್ಲಿ ಸ್ಥಾನ ಖಚಿ​ತ​ಪ​ಡಿ​ಸಿ​ಕೊ​ಳ್ಳಲಿದೆ. ಜೊತೆಗೆ ಮೊದಲ ಕ್ವಾಲಿ​ಫೈ​ಯರ್‌ನಲ್ಲಿ ಆಡುವ ಅರ್ಹತೆ ಗಿಟ್ಟಿ​ಸ​ಲಿದ್ದು, ಮುಂಬೈ ಇಂಡಿ​ಯನ್ಸ್‌ ತಂಡ​ವನ್ನು ಎದು​ರಿ​ಸ​ಲಿದೆ. 

ಟೂರ್ನಿಯಿಂದ ಹೊರಬಿತ್ತು ರಾಜಸ್ಥಾನ, ಕೆಕೆಆರ್‌ಗೆ ಪ್ಲೇ ಆಫ್ ಆಸೆ ಜೀವಂತ!

ಸೋಲುವ ತಂಡದ ಪ್ಲೇ-ಆಫ್‌ ಹಾದಿ ಕಠಿಣಗೊಳ್ಳ​ಲಿದೆ. ಮುಂಬೈ ಹಾಗೂ ಸನ್‌ರೈಸ​ರ್ಸ್ ಪಂದ್ಯದ ಫಲಿ​ತಾಂಶ​ಕ್ಕಾಗಿ ಕಾಯ​ಬೇ​ಕಾ​ಗು​ತ್ತದೆ. ಮುಂಬೈ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಹೈದರಾಬಾದ್ ಮುಗ್ಗರಿಸಿದರೆ ಡೆಲ್ಲಿ ಹಾಗೂ ಆರ್‌ಸಿಬಿ ತಂಡಗಳು ಪ್ಲೇ ಆಫ್ ಸ್ಥಾನ ಖಚಿತವಾಗಲಿದೆ. 

ಪಿಚ್‌ ರಿಪೋರ್ಟ್‌: ಕಳೆದ 4 ಪಂದ್ಯ​ಗ​ಳ​ಲ್ಲಿ ಇಲ್ಲಿ ದೊಡ್ಡ ಮೊತ್ತ ದಾಖಲಾಗಿದ್ದು, 4ರಲ್ಲಿ 3 ಪಂದ್ಯ​ಗ​ಳನ್ನು ಮೊದಲು ಫೀಲ್ಡ್‌ ಮಾಡಿ​ದ​ ತಂಡ ಗೆದ್ದಿದೆ. ಹೀಗಾಗಿ ಮೊದಲು ಬ್ಯಾಟ್‌ ಮಾಡುವ ತಂಡ 200ಕ್ಕೂ ಹೆಚ್ಚು ರನ್‌ ಗುರಿ ನಿಗದಿ ಮಾಡ​ಬೇ​ಕಿದೆ.

ಸಂಭ​ವ​ನೀಯ ಆಟ​ಗಾ​ರರ ಪಟ್ಟಿ

ಆರ್‌ಸಿಬಿ: ಜೋಸ್ ಫಿಲಿಪಿ, ದೇವದತ್ ಪಡಿ​ಕ್ಕಲ್‌, ವಿರಾಟ್ ಕೊಹ್ಲಿ​(​ನಾ​ಯ​ಕ), ಎಬಿ ಡಿ ವಿಲಿ​ಯರ್ಸ್, ಗುರ್‌ಕೀರತ್ ಮನ್‌, ವಾಷಿಂಗ್ಟನ್ ಸುಂದರ್‌, ಕ್ರಿಸ್ ಮೋರಿಸ್‌, ಇಸುರು ಉಡಾನ, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್‌, ಯುಜುವೇಂದ್ರ ಚಹಲ್‌.

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್‌, ಶ್ರೇಯಸ್ ಅಯ್ಯರ್‌(ನಾ​ಯ​ಕ), ರಿಷಭ್ ಪಂತ್‌, ಶಿಮ್ರೋನ್ ಹೆಟ್ಮೇ​ಯರ್‌, ಮಾರ್ಕಸ್ ಸ್ಟೋಯ್ನಿಸ್‌, ರವಿಚಂದ್ರನ್ ಅಶ್ವಿನ್‌, ಪ್ರವೀಣ್ ದುಬೆ‌, ಹರ್ಷಲ್ ಪಟೇಲ್‌, ಕಗಿಸೋ ರಬಾಡ, ಆನ್ರಿಚ್ ನೋಕಿಯಾ.

ಸ್ಥಳ: ಅಬು​ಧಾಬಿ
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
 

Follow Us:
Download App:
  • android
  • ios