ಬ್ಯಾಟಿಂಗ್ ಆರ್ಡರ್ ಬದಲಾವಣೆ; 171 ರನ್‌ಗೆ ತೃಪ್ತಿ ಪಟ್ಟ ಆರ್‌ಸಿಬಿ
ತಂಡದಲ್ಲಿ ಯಾವುದೇ ಬದಲಾವಣೆ ಮಾಡದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರ್ಡರ್‌ನಲ್ಲಿ ಬದಲಾವಣೆ ಮಾಡಿ ಕೈಸುಟ್ಟುಕೊಂಡಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಬೆಂಗಳೂರು ತಂಡ 171 ರನ್ ಸಿಡಿಸಿದೆ.
ಶಾರ್ಜಾ(ಅ.15): ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಾಯಕ ವಿರಾಟ್ ಕೊಹ್ಲಿ ಸಿಡಿಸಿದ 48 ರನ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ವಿಕೆಟ್ ನಷ್ಟಕ್ಕೆ 171 ರನ್ ಸಿಡಿಸಿದೆ.
ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ದೇವದತ್ ಪಡಿಕ್ಕಲ್ 18 ರನ್ ಸಿಡಿಸಿ ಔಟಾದರೆ, ಆ್ಯರೋನ್ ಫಿಂಚ್ 20 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಿಂದ ಆರ‌್‌ಸಿಬಿ ಚೇತರಿಸಿಕೊಂಡಿತು.
ಕೊಹ್ಲಿ ಹೋರಾಟ ಮುಂದುವರಿಸಿದರೆ, ಇತ್ತ ವಾಶಿಂಗ್ಟನ್ ಸುಂದರ್ 13 ರನ್ ಸಿಡಿಸಿ ನಿರ್ಗಮಿಸಿದರು. ಶಿವಂ ದುಬೆ 23 ರನ್ ಕಾಣಿಕೆ ನೀಡಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬರಬೇಕಿದ್ದ ಎಬಿ ಡಿವಿಲಿಯರ್ಸ್ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಆದರೆ ಎಬಿಡಿ ಅಬ್ಬರಿಸಲಿಲ್ಲ. ಕೇವಲ 2 ರನ್ ಸಿಡಿಸಿ ಔಟಾದರು.
ಕ್ರಿಸ್ ಮೊರಿಸ್ ಅಬ್ಬರಿಸಿದರು. ಮೊರಿಸ್‌ಗೆ ಇಸ್ರು ಉದಾನ್ ಉತ್ತಮ ಸಾಥ್ ನೀಡಿದರು. ಮೊರಿಸ್ 8 ಎಸೆತದಲ್ಲಿ 25 ರನ್ ಸಿಡಿಸಿದರು. ಉದಾಯನ ಅಜೇಯ 10 ರನ್ ಸಿಡಿಸಿದರು. ಈ ಮೂಲಕ ಆರ್‍ಸಿಬಿ 6 ವಿಕೆಟ್ ನಷ್ಟಕ್ಕೆ 171 ರನ್ ಸಿಡಿಸಿತು.