ದುಬೈ(ನ.01):  ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ 13ನೇ ಆವೃತ್ತಿ ಐಪಿಎಲ್ ಟೂರ್ನಿಯ ಅಂತಿಮ ಲೀಗ್ ಪಂದ್ಯ ಆಡಲು ಸಜ್ಜಾಗಿದೆ. ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳಲು ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ರಾಜಸ್ಥಾನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಕೆಕೆಆರ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಆ್ಯಂಡ್ರೆ ರಸೆಲ್ ಹಾಗೂ ಶಿವಂ ಮಾವಿ ತಂಡ ಸೇರಿಕೊಂಡಿದ್ದಾರೆ.

 

ಕೆಕೆಆರ್ ಹಾಗೂ ರಾಜಸ್ಥಾನ 13 ಲೀಗ್ ಪಂದ್ಯದಲ್ಲಿ 6 ಗೆಲುವು ಸಾಧಿಸಿದೆ. ಈ ಮೂಲಕ 12 ಅಂಕ ಸಂಪಾದಿಸಿ ಕ್ರಮವಾಗಿ 6 ಮತ್ತು 7ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದ ತಂಡ 14 ಅಂಕ ಸಂಪಾದಿಸಲಿದೆ. ಈ ಮೂಲಕ ಪ್ಲೇ ಆಫ್ ಸ್ಥಾನದ ಅವಕಾಶ ಸಿಗಲಿದೆ.