ದುಬೈ(ಅ.16):  ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ನಡುವಿನ ಪಂದ್ಯ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಆರ್‌ಸಿಬಿ ಬೆಂಗಳೂರಿನ ತಂಡವಾಗಿದ್ದರೂ, ಅತೀ ಹೆಚ್ಚು ಕನ್ನಡಿಗರಿರುವ ತಂಡ ಪಂಜಾಬ್. ಇನ್ನು ಆರ್‌ಸಿಬಿಯಲ್ಲಿ ಮಿಂಚಿದ ಕ್ರಿಸ್ ಗೇಲ್ ಇದೀಗ ಪಂಜಾಬ್ ಪರ ಆಡುತ್ತಿದ್ದಾರೆ. 13ನೇ ಆವೃತ್ತಿಯಲ್ಲಿ ಗೇಲ್ ಆರೋಗ್ಯ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು. ಕಳೆದ ಪಂದ್ಯದಲ್ಲಿ ಗೇಲ್ ಕಣಕ್ಕಿಳಿದ್ದರು. ಈ ವೇಳೆ ಗೇಲ್ ಆತ್ಮೀಯ ಗೆಳೆಯ ಯಜುವೇಂದ್ರ ಚಹಾಲ್ ಭೇಟಿಯಾಗಿದ್ದಾರೆ.

IPL 2020: ಆರ್‌ಸಿಬಿ ಎದುರು ಕೊನೆ ಓವರ್ ಹೈಡ್ರಾಮ ಗೆದ್ದ ಪಂಜಾಬ್..!.

ಐಪಿಎಲ್ ಟೂರ್ನಿಗಾಗಿ ದುಬೈನಲ್ಲಿ ಉಭಯ ತಂಡಗಳು ಬೀಡುಬಿಟ್ಟಿದ್ದರೂ, ಗೇಲ್ ಆರೋಗ್ಯ ಸಮಸ್ಯೆ ಕಾರಣ ಆಸ್ಪತ್ರೆ ಹಾಗೂ ವಿಶ್ರಾಂತಿಯಲ್ಲಿ ಕಾಲ ಕಳೆದಿದ್ದರು. ಹೀಗಾಗಿ ಬೇಟಿಯಾಗಿರಲಿಲ್ಲ. ಕಳೆದ ಪಂದ್ಯಕ್ಕೂ ಮುನ್ನ ಯಜುವೇಂದ್ರ ಚಹಾಲ್, ಗೆಳೆಯ ಕ್ರಿಸ್ ಗೇಲ್ ತಬ್ಬಿಕೊಂಡಿದ್ದರು. ಈ ಫೋಟೋವನ್ನು ಟ್ವೀಟ್ ಮಾಡಿದ ಚಹಾಲ್, ಟಿಮೊನ್ ಹಾಗೂ ಪುಂಬಾ ಮತ್ತೆ ಒಂದಾಗಿದ್ದಾರೆ ಎಂದಿದ್ದಾರೆ.

 

ಪುಟಾಣಿ ಮಕ್ಕಳಿಗಾಗಿ ತಯಾರಿಸಲಾಗಿರುವ ಅಮೆರಿಕನ್ ಅ್ಯನಿಮೇಟೆಡ್ ಸ್ಟೋರಿ ಟಿಮೋನ್ ಹಾಗೂ ಪುಂಬಾ ಅತ್ಯಂತ ಜನಪ್ರಿಯವಾಗಿದೆ.  ಇದೀಗ ಟಿಮೊನ್ ಹಾಗೂ ಪುಂಬಾ ಮತ್ತೆ ಒಂದಾಗಿದ್ದಾರೆ ಎಂದು ಗೇಲ್ ತಬ್ಬಿಕೊಂಡ ಫೋಟೋವನ್ನು ಚಹಾಲ್ ಪೋಸ್ಟ್ ಮಾಡಿದ್ದಾರೆ.

ಸತತ ಸೋಲಿನಿಂದ ಕಂಗೆಟ್ಟಿದ್ದ ಪಂಜಾಬ್ ಗೇಲ್ ಆಗಮನದಿಂದ ಸೋಲಿನಿಂದ ಹೊರಬಂದಿದೆ. ಕ್ರಿಸ್ ಗೇಲ್ ಹಾಫ್ ಸೆಂಚುರಿ ಸಿಡಿಸಿ ಪಂಜಾಬ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು