ಶಾರ್ಜಾ(ನ.03): ಐಪಿಎಲ್ 2020 ಟೂರ್ನಿಯ 56ನೇ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿದೆ. ಸನ್‌ರೈಸರ್ಸ್ ಪ್ಲೇ ಆಫ್ ಸ್ಥಾನಕ್ಕೆ ಎಂಟ್ರಿಕೊಡಲು ಈ ಪಂದ್ಯ ಗೆಲ್ಲಲೇಬೇಕು. ಇತ್ತ ಮುಂಬೈಗೆ ಈ ಪಂದ್ಯದ ಫಲಿತಾಂಶ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಮರಳಿದ್ದಾರೆ. ಪ್ಲೇ ಆಫ್ ಸುತ್ತಿನ ಪಂದ್ಯಕ್ಕಾಗಿ ಪ್ರಮುಖ ಬೌಲರ್‌ಗಳಿಗೆ ವಿಶ್ರಾಂತಿ ನೀಡಲಾಗಿದೆ.ಜಸ್‌ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೌಲ್ಟ್ ‌ಗೆ ವಿಶ್ರಾಂತಿ ನೀಡಲಾಗಿದೆ.ಧವಲ್ ಕುಲಕರ್ಣಿ ಹಾಗೂ ಪ್ಯಾಟಿನ್ಸನ್ ಮುಂಬೈ ತಂಡ ಸೇರಿಕೊಂಡಿದ್ದಾರೆ. ಸನ್ ರೈಸರ್ಸ್ ಪರ ಅಭಿಶೇಕ್ ಶರ್ಮಾ ಬದಲು ಪ್ರಿಯಂ ಗರ್ಗ್ ತಂಡಕ್ಕೆ ಆಗಮಿಸಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ತಂಡ 12 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಮುಂಬೈ ವಿರುದ್ಧ ಗೆಲುವು ಸಾಧಿಸಿದರೆ ನೇರವಾಗಿ 3ನೇ ಸ್ಥಾನಕ್ಕೇರಲಿದೆ. ಈ ಮೂಲಕ ಪ್ಲೇ ಆಫ್ ಸ್ಥಾನಕ್ಕೆ ಎಂಟ್ರಿಕೊಡಲಿದೆ. ಹೀಗಾಗದಲ್ಲಿ 4ನೇ ಸ್ಥಾನದಲ್ಲಿರುವ ಕೆಕೆಆರ್ ತಂಡ ಟೂರ್ನಿಯಿಂದ ಹೊರಬೀಳಲಿದೆ.