ದುಬೈ(ಅ.24):  ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ 43ನೇ ಲೀಗ್ ಪಂದ್ಯ ಕುತೂಹಲದ ಆಗರವಾಗಿದೆ. ದುಬೈನಲ್ಲಿ ನಡೆಯತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಉಭಯ ತಂಡದಲ್ಲೂ ಬದಲಾವಣೆ ಮಾಡಲಾಗಿದೆ. ಹೈದರಾಬಾದ್ ತಂಡದಲ್ಲಿ ಶಹಬಾಜ್ ನದೀಮ್ ಬದಲು ಖಲೀಲ್ ಅಹಮ್ಮದ್ ತಂಡ ಸೇರಿಕೊಂಡಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲೂ ಬದಲಾವಣೆ ಮಾಡಲಾಗಿದೆ. ಮಯಾಂಕ್ ಅಗರ್ವಾಲ್, ಜೇಮ್ಸ್ ನೀಶಮ್ ಬದಲು ಮನ್ದೀಪ್ ಸಿಂಗ್ ಹಾಗೂ ಕ್ರಿಸ್ ಜೋರ್ಡನ್ ತಂಡ ಸೇರಿಕೊಂಡಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ತಂಡ ಆಡಿದ 10 ಪಂದ್ಯದಲ್ಲಿ 4ರಲ್ಲಿ ಗೆಲುವು ಹಾಗೂ 6ರಲ್ಲಿ ಸೋಲು ಕಂಡಿದೆ. ಇನ್ನು ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಕೂಡ 10ರಲ್ಲಿ 4 ಗೆಲುವು ಕಂಡಿದೆ.