ಅಬುಧಾಬಿ(ಅ.18): ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ ನೈಟ್‌ ರೈಡರ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ನಾಯಕ ಡೇವಿಡ್ ವಾರ್ನರ್ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

ಇನ್ನು ನಿರೀಕ್ಷೆಯಂತೆಯೇ ಕೋಲ್ಕತ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿದ್ದು, ಹೈದರಾಬಾದ್ ತಂಡದಲ್ಲಿ ಖಲೀಲ್ ಅಹಮ್ಮದ್ ಬದಲಿಗೆ ಬಾಸಿಲ್ ಥಂಪಿ ತಂಡ ಕೂಡಿಕೊಂಡಿದ್ದಾರೆ. ಇನ್ನು ಕೆಕೆಆರ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಕುಲ್ದೀಪ್ ಯಾದವ್ ಹಾಗೂ ಲುಕಿ ಫರ್ಗ್ಯೂಸನ್ ತಂಡ ಕೂಡಿಕೊಂಡಿದ್ದಾರೆ

ಈಗಾಗಲೇ ಕೋಲ್ಕತ ನೈಟ್‌ ರೈಡರ್ಸ್ ತಂಡ ಆಡಿದ 8 ಪಂದ್ಯಗಳ ಪೈಕಿ ತಲಾ 4 ಗೆಲುವು ಹಾಗೂ ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, ಇನ್ನೊಂದು ಕಡೆ ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ 8 ಪಂದ್ಯಗಳಲ್ಲಿ 3  ಗೆಲುವು ಹಾಗೂ 5 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಪ್ರವೇಶದ ದೃಷ್ಟಿಯಿಂದ ಉಭಯ ತಂಡಗಳಿಗೂ ಈ ಪಂದ್ಯ ತುಂಬಾ ಮಹತ್ವದ್ದೆನಿಸಿದೆ.

ತಂಡಗಳು ಹೀಗಿವೆ:

ಸನ್‌ರೈಸರ್ಸ್ ಹೈದರಾಬಾದ್:

ಕೋಲ್ಕತ ನೈಟ್‌ ರೈಡರ್ಸ್: