ಅಬುಧಾಬಿ(ಸೆ.26): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 8ನೇ ಪಂದ್ಯದಲ್ಲಿ ಕೋಲ್ಕತ ನೈಟ್‌ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದಾರಾಬಾದ್ ತಂಡಗಳು ಮುಖಾಮುಖಿಯಾಗುತ್ತಿದ್ದು ಟಾಸ್ ಗೆದ್ದ  ತಂಡ ಆಯ್ದುಕೊಂಡಿದೆ.

ಉಭಯ ತಂಡಗಳಲ್ಲೂ ಮೇಜರ್ ಸರ್ಜರಿ ಮಾಡಲಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಆಲ್ರೌಂಡರ್ ಮಿಚೆಲ್ ಮಾರ್ಷ್ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಮೊಹಮ್ಮದ್ ನಬೀ, ವಿಜಯ್ ಶಂಕರ್ ಸ್ಥಾನಕ್ಕೆ ವೃದ್ದಿಮಾನ್ ಸಾಹ ಹಾಗೂ ಸಂದೀಪ್ ಶರ್ಮಾ ಬದಲಿಗೆ ಖಲೀಲ್ ಅಹಮ್ಮದ್ ತಂಡ ಕೂಡಿಕೊಂಡಿದ್ದಾರೆ.
ಇನ್ನು ಕೆಕೆಆರ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಸಂದೀಪ್ ಶರ್ಮಾ ಹಾಗೂ ನಿಖಿಲ್ ನಾಯ್ಕ್ ಬದಲಿಗೆ ನಾಗರಕೋಟಿ ಹಾಗೂ ವರುಣ್ ಚಕ್ರವರ್ತಿ ತಂಡ ಕೂಡಿಕೊಂಡಿದ್ದಾರೆ

ಉಭಯ ತಂಡಗಳು ತಾವಾಡಿದ ಮೊದಲ ಪಂದ್ಯದಲ್ಲಿ ಸೋಲಿನ ಕಹಿಯುಂಡಿದ್ದು, ಇದೀಗ ಈ ಆವೃತ್ತಿಯಲ್ಲಿ ಮೊದಲ ಗೆಲುವನ್ನು ದಾಖಲಿಸಲು ಎದುರು ನೋಡುತ್ತಿವೆ. ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 10 ರನ್‌ಗಳ ಸೋಲು ಅನುಭವಿಸಿತ್ತು. ಇನ್ನು ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತ ನೈಟ್‌ರೈಡರ್ಸ್ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಶರಣಾಗಿತ್ತು.

 
ತಂಡಗಳು ಹೀಗಿವೆ:

ಸನ್‌ರೈಸರ್ಸ್ ಹೈದರಾಬಾದ್:

ಕೋಲ್ಕತ ನೈಟ್‌ ರೈಡರ್ಸ್