ಅಬು ಧಾಬಿ(ನ.08): ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲಲೇಬೇಕಾದ ಪಂದ್ಯ. ಗೆದ್ದ ತಂಡಕ್ಕೆ ಫೈನಲ್ ಟಿಕೆಟ್ ಸೋತ ತಂಡ ಟೂರ್ನಿಯಿಂದ ಹೊರಬೀಳುವ ಆಘಾತ, ಹೀಗಾಗಿ ಜಿದ್ದಾ ಜಿದ್ದಿನ ಹೋರಾಟ ನಡೆಯುತ್ತಿದೆ. ಶಿಖರ್ ಧವನ್ ಅರ್ಧಶತಕ ಹಾಗೂ ಇತರ ಬ್ಯಾಟ್ಸ್‌ಮನ್ ಸಹಕಾರದಿಂದ ಡೆಲ್ಲಿ ಕ್ಯಾಪಿಟಲ್ಸ್ 189 ರನ್ ಸಿಡಿಸಿದೆ.

2ನೇ ಕ್ವಾಲಿಫೈಯರ್ ಪಂದ್ಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯಿತು. ಶಿಖರ್ ಧವನ್ ಹಾಗೂ ಮಾರ್ಕಸ್ ಸ್ಟೊಯ್ನಿಸ್ ಮೊದಲ ವಿಕೆಟ್‌ಗೆ 86 ರನ್ ಜೊತೆಯಾಟ ನೀಡಿದರು. ಸ್ಟೊಯ್ನಿಸ್ 38 ರನ್ ಸಿಡಿಸಿ ಔಟಾದರು.

ಧವನ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಜೊತೆಯಾಟದ ಮೂಲಕ ಡೆಲ್ಲಿ ಮತ್ತೆ ಹೋರಾಟ ಮುಂದುವರಿಸಿತು. ಆದರೆ ಶ್ರೇಯಸ್ ಅಯ್ಯರ್ 21 ರನ್ ಸಿಡಿಸಿ ಔಟಾದರು. ಇತ್ತ ಅಬ್ಬರಿಸಿದ ಶಿಖರ್ ಧವನ್ ಹಾಫ್ ಸೆಂಚುರಿ ಸಿಡಿಸಿದರು. ಧವನ್ 78 ರನ್ ಸಿಡಿಸಿ ಔಟಾದರು.

ಶಿಮ್ರೊನ್ ಹೆಟ್ಮೆಯರ್ ಅಂತಿಮ ಹಂತದಲ್ಲಿ ಅಬ್ಬರಿಸಿದರು. ರಿಷಬ್ ಪಂತ್ ಉತ್ತಮ ಸಾಥ್ ನೀಡಿದರು. ಹೆಟ್ಮೆಯರ್ ಅಜೇಯ 42 ರನ್ ಸಿಡಿಸಿದರು.  ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್ ನಷ್ಟಕ್ಕೆ ರನ್ ಸಿಡಿಸಿತು.