ದುಬೈ(ಅ.13): ತಂಡದಲ್ಲಿ 1 ಬದಲಾವಣೆ, ನಿರ್ಧಾರದಲ್ಲೂ ಬದಲಾವಣೆ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್‌ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ. ಅಂಬಾಟಿ ರಾಯಡು ಹಾಗೂ ಶೇನ್ ವ್ಯಾಟ್ಸನ್ ಹೋರಾಟದಿಂದ ಸಿಎಸ್‌ಕೆ 167 ರನ್ ಸಿಡಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕರಲ್ಲೂ ಬದಲಾವಣೆ ಮಾಡಿತ್ತು. ಸ್ಯಾಮ್ ಕುರನ್‌ಗೆ ಬಡ್ತಿ ನೀಡಲಾಗಿತ್ತು. ಆದರೆ ಮತ್ತೊರ್ವ ಆರಂಭಿಕ ಫಾಫ್ ಡುಪ್ಲೆಸಿಸ್ ಶೂನ್ಯಕ್ಕೆ ಔಟಾದರು. ಸ್ಯಾಮ್ ಕುರನ್ ಹೋರಾಟ ಮುಂದುವರಿಸಿದರು.

ಸ್ಯಾಮ್ ಕುರನ್ 31 ರನ್ ಸಿಡಿಸಿದರು. ಇನ್ನು ಶೇನ್ ವ್ಯಾಟ್ಸನ್ ಹಾಗೂ ಅಂಬಾಟಿ ರಾಯುಡು ಜೊತೆಯಾಟ ಚೆನ್ನೈ ತಂಡಕ್ಕೆ ನೆರವಾಯಿತು. ಆದರೆ ಇವಿರಿಬ್ಬರ ರನ್‌ರೇಟ್ ಚೆನ್ನೈ ತಂಡದ ಬೃಹತ್ ಮೊತ್ತಕ್ಕೆ ಅಡ್ಡಿಯಾಯಿತು. ರಾಯುಡು 34 ಎಸೆತದಲ್ಲಿ 41 ರನ್ ಸಿಡಿಸಿ ಔಟಾದರು. ಇನ್ನು ಶೇನ್ ವ್ಯಾಟ್ಸನ್ 38 ಎಸೆತದಲ್ಲಿ 42 ರನ್ ಸಿಡಿಸಿ ಔಟಾದರು.

ಎಂ.ಎಸ್.ಧೋನಿ ಹಾಗೂ ರವೀಂದ್ರ ಜಡೇಜಾ ರನ್ ವೇಗ ಹೆಚ್ಚಿಸುವ ಪ್ರಯತ್ನ ಮಾಡಿದರು.  ಧೋನಿ 21 ರನ್ ಸಿಡಿಸಿದರೆ, ಡ್ವೇನ್ ಬ್ರಾವೋ ಡೌಕೌಟ್ ಆದರು. ರವೀಂದ್ರ  ಜಡೇಜಾ ಅಜೇಯ 25 ರನ್ ಸಿಡಿಸಿದರು. ಈ ಮೂಲಕ ಚೆನ್ನೈ 6 ವಿಕೆಟ್ ನಷ್ಟಕ್ಕೆ 167 ರನ್ ಸಿಡಿಸಿತು.