ಅಬುಧಾಬಿ(ಅ.21): ವೇಗದ ಬೌಲರ್‌ ಲೂಕಿ ಫರ್ಗ್ಯೂಸನ್‌ ಅಂತಿಮ 11ರಲ್ಲಿ ಆಡಿದ ಬಳಿಕ ಬಲಿಷ್ಠ ತಂಡವಾಗಿ ಹೊರ ಹೊಮ್ಮಿರುವ ಕೋಲ್ಕತಾ ನೈಟ್‌ ರೈಡರ್ಸ್‌, 6 ಗೆಲುವಿನೊಂದಿಗೆ 12 ಅಂಕಗಳಿಸಿ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಇಲ್ಲಿ ಬುಧವಾರ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಎದುರಾಗಲಿದೆ. 

9 ಪಂದ್ಯವನ್ನಾಡಿರುವ ಕೆಕೆಆರ್‌, ಮಾರ್ಗನ್‌ ನಾಯಕತ್ವದಲ್ಲಿ ಹೈದ್ರಾಬಾದ್‌ ವಿರುದ್ಧ ಮೊದಲ ಗೆಲುವು ಪಡೆದಿದೆ. ಇದೀಗ ಆರ್‌ಸಿಬಿ ವಿರುದ್ಧ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಇತ್ತ ಆರ್‌ಸಿಬಿ ಕೂಡ ಫುಲ್‌ ಫಾರ್ಮ್‌ನಲ್ಲಿದೆ. ಕಳೆದ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಗೆದ್ದಿರುವ ಕೊಹ್ಲಿ ಬಳಗ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. 

IPL 2020: ಬಲಿಷ್ಠ ಡೆಲ್ಲಿ ಮಣಿಸಿದ ಪಂಜಾಬ್, ಅಂಕಪಟ್ಟಿಯಲ್ಲಿ 5ನೇ ಸ್ಥಾನ!

ಇದೇ ಆವೃತ್ತಿಯಲ್ಲಿ ಈ ಮೊದಲಿನ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಆರ್‌ಸಿಬಿ 82 ರನ್‌ನಿಂದ ಗೆದ್ದಿತ್ತು. ಇದೀಗ 2ನೇ ಬಾರಿ ಮುಖಾಮುಖಿಯಲ್ಲಿ ಆರ್‌ಸಿಬಿ ಮತ್ತದೇ ದೊಡ್ಡ ಜಯದ ಉತ್ಸಾಹದಲ್ಲಿದೆ.

ಪಿಚ್‌ ರಿಪೋರ್ಟ್‌: ಇಲ್ಲಿನ ಪಿಚ್‌ ಸಮತೋಲದಿಂದ ಕೂಡಿದ್ದು, ಮೊದಲು ಬ್ಯಾಟ್‌ ಮಾಡುವ ತಂಡ 175ಕ್ಕಿಂತ ಹೆಚ್ಚಿನ ಮೊತ್ತ ಕಲೆಹಾಕಬೇಕಿದೆ. ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ದೇವದತ್ ಪಡಿಕ್ಕಲ್‌, ಆರೋನ್ ಫಿಂಚ್‌, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಗುರುಕೀರತ್ ಮನ್‌, ವಾಷಿಂಗ್ಟನ್ ಸುಂದರ್‌, ಕ್ರಿಸ್ ಮೋರಿಸ್‌, ಶಬಾಜ್ ಅಹಮ್ಮದ್‌, ಇಸಾರು ಉದಾನ, ನವದೀಪ್ ಸೈನಿ, ಯುಜುವೇಂದ್ರ ಚಹಲ್‌.

ಕೆಕೆಆರ್‌: ಶುಭ್‌ಮನ್ ಗಿಲ್‌, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ‌, ಆಂಡ್ರೆ ರಸೆಲ್‌, ಇಯಾನ್ ಮಾರ್ಗನ್‌ (ನಾಯಕ), ದಿನೇಶ್ ಕಾರ್ತಿಕ್‌, ಪ್ಯಾಟ್ ಕಮಿನ್ಸ್‌, ಶಿವಂ ಮಾವಿ, ಕುಲ್ದೀಪ್ ಯಾದವ್‌, ಲೂಕಿ ಫರ್ಗ್ಯೂಸನ್‌, ವರುಣ್ ಚಕ್ರವರ್ತಿ.

ಸ್ಥಳ: ಅಬುಧಾಬಿ, 
ಆರಂಭ: ರಾತ್ರಿ 7.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್