ಶಾರ್ಜಾ(ಅ.03): ಪೃಥ್ವಿ ಶಾ ಸಿಡಿಸಿದ 66  ಹಾಗೂ ನಾಯಕ ಶ್ರೇಯರ್ ಸಿಡಿಸಿದ  88 ರನ್ ನೆರವಿಂದ ಡೆಲ್ಲಿ ಕ್ಯಾಪಿಟಲ್ಸ್ ಶಾರ್ಜಾದಲ್ಲಿ ಅಬ್ಬರಿಸಿದೆ . ಕೋಲ್ಕತಾ ನೈಟ್ ವಿರುದ್ಧ  ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಡೆಲ್ಲಿ 4 ವಿಕೆಟ್ ನಷ್ಟಕ್ಕೆ 228 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಡೆಲ್ಲಿ ತಂಡಕ್ಕೆ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಿದರು. ಧವನ್ 26 ರನ್ ಸಿಡಿಸಿ ಔಟಾದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ವಿಕೆಟ್‌ಗೆ 56 ರನ್ ಸಿಡಿಸಿತು. ನಾಯಕ ಶ್ರೇಯಸ್ ಅಯ್ಯರ್ ಹಾಗೂ ಪೃಥ್ವಿ ಶಾ ಜೊತೆಯಾಟ ಡೆಲ್ಲಿ ತಂಡದ ಬೃಹತ್ ಮೊತ್ತಕ್ಕೆ ಸಹಕಾರಿಯಾಯಿತು.

ಅಬ್ಬರಿಸಿದ ಪೃಥ್ವಿ ಸಾ ಹಾಫ್ ಸೆಂಚುರಿ ಸಿಡಿಸಿದರು. 41 ಎಸೆತಗಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಪೃಥ್ವಿ ಶಾ 61 ರನ್ ಸಿಡಿಸಿ ಔಟಾದರು. ಇತ್ತ ಶ್ರೇಯಸ್ ಅಯ್ಯರ್ ಅಬ್ಬರ ಆರಂಭಗೊಂಡಿತು. ಉತ್ತಮ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಅಯ್ಯರ್ ಅರ್ಧಶತಕ ಸಿಡಿಸಿದರು. ಅಯ್ಯರ್‌ಗೆ ರಿಷಬ್ ಪಂತ್ ಉತ್ತಮ ಸಾಥ್ ನೀಡಿದರು.  

ರಿಷಬ್ ಪಂತ್ 17 ಎಸೆತದಲ್ಲಿ 35 ರನ್ ಸಿಡಿಸಿ ಔಟಾದರು. ಆದರೆ ಶ್ರೇಯಸ್ ಅಯ್ಯರ್ ಹೋರಾಟ ಮುಂದುವರಿಸಿದರು. ಮಾರ್ಕಸ್ ಸ್ಟೋಯ್ನಿಸ್ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಅಯ್ಯರ್ 38 ಎಸೆತದಲ್ಲಿ ಅಜೇಯ 88 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ ನಷ್ಟಕ್ಕೆ 228 ರನ್ ಸಿಡಿಸಿತು. ಗರಿಷ್ಠ ರನ್ ಸಿಡಿಸಿ ಮತ್ತೊಂದು ದಾಖಲೆ ನಿರ್ಮಿಸಿತು. ಮೊದಲ ಇನಿಂಗ್ಸ್ ಮೂಲಕ ಶಾರ್ಜಾದಲ್ಲಿ ಗರಿಷ್ಠ ರನ್ ಸಿಡಿಸಿದ ದಾಖಲೆ ಬರೆಯಿತು.