Asianet Suvarna News Asianet Suvarna News

ಮುಂಬೈ ಅಬ್ಬರದ ಮುಂದೆ ನಡೆಯಲಿಲ್ಲ ಡೆಲ್ಲಿ ಆಟ, ರೋಹಿತ್ ಪಡೆಗೆ ರೋಚಕ ಗೆಲುವು!

ಐಪಿಎಲ್ 2020 ಟೂರ್ನಿಯ ಅಗ್ರ 2 ತಂಡಗಳ ನಡುವಿನ ಹೋರಾಟ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಈ ಬಾರಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಡೆಲ್ಲಿ ತಂಡಕ್ಕೆ ಮುಂಬೈ ಇಂಡಿಯನ್ಸ್ ಸೋಲುಣಿಸಿದೆ.  

IPL 2020 Mumbai Indians won by 5 wickets against mumbai indians ckm
Author
Bengaluru, First Published Oct 11, 2020, 11:07 PM IST
  • Facebook
  • Twitter
  • Whatsapp

ಅಬು ಧಾಬಿ(ಅ.11):  ಐಪಿಎಲ್ 2020 ಟೂರ್ನಿಯಲ್ಲಿ ಬಲಿಷ್ಠ ತಂಡ ಡೆಲ್ಲಿ ಕ್ಯಾಪಿಟಲ್ಸ್ ಇದೀಗ 2ನೇ ಸೋಲು ಕಂಡಿದೆ. ರೋಚಕ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್ 5 ವಿಕೆಟ್ ಗೆಲುವು ಸಾಧಿಸಿದೆ. ಮುಂಬೈ ಆಲ್ರೌಂಡರ್ ಪ್ರದರ್ಶನದ ಮೂಲಕ ಡೆಲ್ಲಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. 

163 ರನ್ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯಕುಮಾರ್ ಯಾದವ್ ಜೊತೆಯಾಟದಿಂದ ಮುಂಬೈ ಇಂಡಿಯನ್ಸ್ ಚೇತರಿಸಿಕೊಂಡಿತು. ಆರಂಭಿಕ ಯಶಸ್ಸು ಪಡೆದ ಡೆಲ್ಲಿ ಪಡೆಗೆ, ಡಿಕಾಕ್ ಹಾಗೂ ಯಾದವ್ ಜೊತೆಯಾಟ ತಲೆನೋವಾಗಿ ಪರಿಣಿಮಿಸಿತು.

ಅಬ್ಬರಿಸಿದ ಡಿಕಾಕ್ ಹಾಫ್ ಸೆಂಚುರಿ ಸಿಡಿಸಿದರು. ಡಿಕಾಕ್ 36 ಎಸೆತದಲ್ಲಿ 53 ರನ್ ಸಿಡಿಸಿ ಔಟಾದರು. ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮುಂದುವರಿಸಿದರು. ಯಾದವ್‌ಗೆ ಇಶಾನ್ ಕಿಶನ್ ಸಾಥ್ ನೀಡಿದರು. ಸೂರ್ಯಕುಮಾರ್ ಯಾದವ್ 53 ರನ್ ಸಿಡಿಸಿ ಔಟಾದರು. ಸೂರ್ಯಕುಮಾರ್ ವಿಕೆಟ್ ಪತನ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು.

ಹಾರ್ದಿಕ್ ಪಾಂಡ್ಯ ಡಕೌಟ್ ಆದರು. ಇದು ಮುಂಬೈ ಪಾಳಯದಲ್ಲಿ ಆತಂಕ ಸೃಷ್ಟಿಸಿತು. ಇತ್ತ 28 ರನ್ ಸಿಡಿಸಿದ ಇಶಾನ್ ಕಿಶನ್ ವಿಕೆಟ್ ಕೂಡ ಪತನಗೊಂಡಿತು. ಸುಲಭವಾಗಿ ದಡ ಸೇರುವ ಸೂಚನೆ ನೀಡಿದ್ದ ಮುಂಬೈ ಸೈನ್ಯಕ್ಕೆ ಕಠಿಣ  ಹಾದಿ ಎದುರಾಯಿತು. ಮುಂಬೈ ಗೆಲುವಿಗೆ ಅಂತಿಮ 6 ಎಸೆತದಲ್ಲಿ 7 ರನ್ ಅವಶ್ಯಕತೆ ಇತ್ತು. 

ಕ್ರುನಾಲ್ ಪಾಂಡ್ಯ ಬೌಂಡರಿ ಸಿಡಿಸೋ ಮೂಲಕ ಆತಂಕ ಕೊಂಚ ದೂರ ಮಾಡಿದರು. 4ನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಸಿಡಿಸಿದ ಕ್ರುನಾಲ್ ಪಾಂಡ್ಯ ಮುಂಬೈಗೆ 5 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು. ಕೀರನ್ ಪೊಲಾರ್ಡ್ ಅಜೇಯ 11 ರನ್ ಹಾಗೂ ಕ್ರುನಾಲ್ ಪಾಂಡ್ಯ ಅಜೇಯ 12 ರನ್ ಸಿಡಿಸಿದರು. 

Follow Us:
Download App:
  • android
  • ios