ಶಾರ್ಜಾ(ಅ.23):  ತಂಡದಲ್ಲಿ 3 ಬದಲಾವಣೆ, ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲೇಬೇಕೆಂಬ ಚಲದೊಂದಿಗೆ ಕಣಕ್ಕಿಳಿದ ಚೆನ್ನೈ ಸೂಪರ್ ಕಿಂಗ್ಸ್ ಭಾರಿ ಮುಖಭಂಕಕ್ಕೆ ಒಳಗಾಗಿದೆ. ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಸಿಎಸ್‌ಕೆ ತಂಡ ಅತೀ ಕಡಿಮೆ ಮೊತ್ತ ದಾಖಲಿಸಿದ ಅಪಖ್ಯಾತಿಗೆ ಗುರಿಯಾಗಿದೆ. ಮುಂಬೈ ಇಂಡಿಯನ್ಸ್ ದಾಳಿಗೆ ನಲುಗಿದೆ ಧೋನಿ ಪಡೆ ಕೇವಲ 114 ರನ್ ಸಿಡಿಸಿದೆ.

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ದಾಖಲಿಸಿದ 2ನೇ ಅತೀ ಕಡಿಮೆ ಮೊತ್ತ ಇದಾಗಿದೆ. ಇದಕ್ಕೂ ಮೊದಲು ಮುಂಬೈ ವಿರುದ್ಧ 2013ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 79 ರನ್ ಸಿಡಿಸಿ ಆಲೌಟ್ ಆಗಿತ್ತು. ಮೊದಲು ಬ್ಯಾಟಿಂಗ್ ಇಳಿದ ಚೆನ್ನೈ ತಂಡ ರನ್ ಮಾತ್ರವಲ್ಲ ವಿಕೆಟ ಉಳಿಸಿಕೊಳ್ಳಲು ಪರದಾಡಿದೆ. ರುತರಾಜ್ ಗಾಯ್ಕವಾಡ್, ಫಾಫ್ ಡುಪ್ಲೆಸಿಸ್, ಅಂಬಾಟಿ ರಾಯುಡು, ಎನ್ ಜಗದೀಶನ್ ಬಂದ ರೀತಿ ವಾಪಸ್ ಆದರು. ಇನ್ನು ನಾಯಕ ಧೋನಿ 16 ರನ್ ಸಿಡಿಸಿ ಔಟಾದರು.

ರವೀಂದ್ರ ಜಡೇಜಾ 7, ಸ್ಯಾಮ್ ಕುರನ್ ಹೋರಾಟ ಮುಂದುವರಿಸಿದರು. ದೀಪಕ್ ಚಹಾರ್, ಶಾರ್ದೂಲ್ ಠಾಕೂರ್ ಕೂಡ ಆಸರೆಯಾಗಲಿಲ್ಲ. ಸ್ಯಾಮ್ ಕುರನ್ ಹೋರಾಟದಿಂದ ಚೆನ್ನೈ 100 ರನ್ ಗಡಿ ದಾಟಿತು.  ಕುರನ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಸ್ಯಾಮ್ ಕುರನ್ 52 ರನ್ ಸಿಡಿಸಿ ಔಟಾದರು. ಇಮ್ರಾನ್ ತಾಹಿಯಾ ಅಜೇಯ 13 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 9 ವಿಕೆಟ್ ನಷ್ಟಕ್ಕೆ 114 ರನ್ ಸಿಡಿಸಿತು.