ಶಾರ್ಜಾ(ಅ.23): ಐಪಿಎಲ್ ಟೂರ್ನಿ ಇತಿಹಾಸದಲ್ಲಿ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ3 ನೇ ಸ್ಥಾನದಲ್ಲಿದ್ದರೆ, ಕಳಪೆ ಪ್ರದರ್ಶನದ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಸ್ಥಾನದಲ್ಲಿದೆ. ಇದೀಗ 13ನೇ ಆವೃತ್ತಿಯಲ್ಲಿ 2ನೇ ಬಾರಿ ಮುಖಾಮುಖಿಯಾಗಲು ಚೆನ್ನೈ ಹಾಗೂ ಮುಂಬೈ ಸಜ್ಜಾಗಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿದೆ.

 

ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಬದಲು ಕೀರನ್ ಪೊಲಾರ್ಡ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಅನಾರೋಗ್ಯ ಕಾರಣ ಪಂದ್ಯದಿಂದ ಹೊರಗುಳಿದಿದ್ದಾರೆ.  ಸೌರಬ್ ತಿವಾರಿ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದಾರೆ. ಚೆನ್ನೈ ತಂಡದಲ್ಲಿ ಮೂರು ಪ್ರಮುಖ ಬದಲಾವಣೆ ಮಾಡಲಾಗಿದೆ. ಸ್ಯಾಮ್ ಕುರನ್, ಜಗದೀಶನ್, ರುತುರಾಜ್ ಗಾಯಕ್ವಾಡ್ ತಂಡ ಸೇರಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ 9 ಪಂದ್ಯದಲ್ಲಿ 6 ಗೆಲುವು ದಾಖಲಿಸಿದ್ದರೆ, 3ರಲ್ಲಿ ಸೋಲು ಕಂಡಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಅಡಿದ 10 ಪಂದ್ಯದಲ್ಲಿ ಕೇವಲ 3 ಗೆಲುವು ಸಾಧಿಸಿ, 7ರಲ್ಲಿ ಸೋಲು ಕಂಡಿದೆ.

ಕ್ರೀಡಾಂಗಣ: ಶಾರ್ಜಾ
ಸಮಯ: 7.30 PM(ಭಾರತೀಯ ಕಾಲಮಾನ)