ಶಾರ್ಜಾ(ಅ.17): ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಗೆಲುವಿನೊಂದಿಗೆ ಸತತ ಸೋಲಿನಿಂದ ಹೊರ ಬಂದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಮತ್ತೆ ಸೋಲಿಗೆ ಗುರಿಯಾಗಿದೆ. ಶಿಖರ್ ಧವನ್ ಶತಕದ ಆಟಕ್ಕೆ ತಲೆಬಾಗಿದೆ. ಆದರೆ ಎಲ್ಲರಿಗೂ ಈಗ ಕಾಡುತ್ತಿರುವ ಒಂದೆ ಪ್ರಶ್ನೆ ಚೆನ್ನೈ ಸೂಪರ್ ಕಿಂಗ್ಸ್ ಪರ ಬ್ರಾವೋ ಯಾಕೆ ಕೊನೆ ಓವರ್ ಎಸೆಯಲಿಲ್ಲ.

ಸೂಪರ್ ಕಿಂಗ್ಸ್ ನಾಯಯ ಧೋನಿ ಕೊನೆ ಓವರ್ ಎಸೆಯಲು ರವೀಂದ್ರ ಜಡೇಜಾ ಅವರನ್ನು ಕರೆದು ತಂದರು. ಯಾಕೆ ಬ್ರಾವೋ ಕೊನೆ ಓವರ್ ಮಾಡಲಿಲ್ಲ ಎಂಬುದಕ್ಕೂ ಧೋನಿ ಕಾರಣ ಕೊಟ್ಟಿದ್ದಾರೆ.

ಸೂಪರ್ ಕಿಂಗ್ಸ್  ಮಣಿಸಿ ಅಗ್ರಸ್ಥಾನಕ್ಕೇರಿದ ಡೆಲ್ಲಿ

ಶತಕ ದಾಖಲಿಸಿದ ಧವನ್ ಅವರಿಗೆ  ಚೆನ್ನೈ ಮೂರು ಸಾರಿ ಜೀವದಾನ ನೀಡಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಕಳಪೆ ಕ್ಷೇತ್ರರಕ್ಷಣೆ ದುಬಾರಿ ದಂಡ ತೆರುವಂತೆ ಮಾಡಿತು. ಹದಿನೇಳನೇ ಓವರ್ ನಲ್ಲಿ ಬಳಲಿದ್ದ ಬ್ರಾವೋ ಪುನಃ ಬೌಲಿಂಗ್ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ.

ಕೊನೆ ಓವರ್ ನಲ್ಲಿ ದೆಹಲಿಗೆ ಗೆಲ್ಲಲು ಹದಿನಾರು ರನ್ ಬೇಕಿತ್ತು.  19 ನೇ ಓವರ್ ಅಧ್ಬುತವಾಗಿ ಸ್ಯಾಮ್ ಕರನ್ ಬೌಲ್ ಮಾಡಿ  ಕೇವಲ ನಾಲ್ಕು ರನ್ ಬಿಟ್ಟುಕೊಟ್ಟಿದ್ದರು. ಕೊನೆ ಓವರ್ ಸ್ಪೆಶಲಿಸ್ಟ್ ಆಗಿದ್ದ ಬ್ರಾವೋ ಫಿಟ್ ಇಲ್ಲದ್ದು ಚೆನ್ನೈ ಸೋಲಿಗೆ ಕಾರಣವಾಯಿತು.