Asianet Suvarna News

ಮಗಳನ್ನು ನೋಡದೆ ತುಂಬಾ ದಿನಗಳಾಗಿದೆ; ಭಾವುಕರಾದ ಮೊಹಮ್ಮದ್ ಶಮಿ!

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಸದ್ಯ ದುಬೈನಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದರ ನಡುವೆ ಶಮಿ ಭಾವುಕರಾಗಿದ್ದಾರೆ. ಶಮಿಯಿಂದ ದೂರವಾಗಿರುವ ಪತ್ನಿ ಜೊತೆಯಲ್ಲಿರುವ ಮಗಳನ್ನು ಶಮಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

IPL 2020 Mohammed Shami turned emotional while speaking about his daughter Aira ck
Author
Bengaluru, First Published Sep 14, 2020, 8:57 PM IST
  • Facebook
  • Twitter
  • Whatsapp

ದುಬೈ(ಸೆ.14):  ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ, ತಮ್ಮ ವೈಯುಕ್ತಿ ಜೀವನದಲ್ಲಿ ಹೆಚ್ಚಿನ ನೋವು ಅನುಭವಿಸಿದ್ದಾರೆ. ಪತ್ನಿ ಹಸಿನ್ ಜಹಾನ್ ಮಾಡಿದ ಆರೋಪ, ಪೊಲೀಸ್ ಠಾಣೆ, ಕೋರ್ಟ್ ಸೇರಿದಂತೆ ಹಲವು ನೋವು ಅನುಭವಿಸಿದ್ದಾರೆ. ಪತ್ನಿ ಹಸಿನ್ ಜಹಾನ್ ಶಮಿಯಿಂದ ದೂರಾಗಿದ್ದರೂ ಆರೋಪ ಮಾಡುತ್ತಲೇ ಇದ್ದಾರೆ. ಇದರ ನಡುವೆ ಶಮಿ ಅತೀ ಹೆಚ್ಚು ಪ್ರೀತಿಸುವು ಪುತ್ರಿಯ ನೆನೆದು ಭಾವುಕರಾಗಿದ್ದಾರೆ.

ಶಮಿ ಜತೆಗಿನ ಅರೆನಗ್ನ ಚಿತ್ರ ಹಂಚಿಕೊಂಡ ಹಸೀನಾ; ಕಿಡಿಕಾರಿದ ಫ್ಯಾನ್ಸ್..!

ಶಮಿಯಿಂದ ಪತ್ನಿ ದೂರವಾಗಿ ವರ್ಷಗಳೇ ಉರುಳಿದೆ. ಇದರ ನಡುವೆ ಶಮಿ ಪುತ್ರಿಯನ್ನು ಭೇಟಿಯಾಗಿದ್ದರು. ಆದರೆ ಕೊರೋನಾ ಹಾಗೂ ಲಾಕ್‌ಡೌನ್ ಕಾರಣ ಶಮಿ ಪುತ್ರಿಯನ್ನು ಭೇಟಿಯಾಗಿಲ್ಲ. ಇದೀಗ ಶಮಿ ಐಪಿಎಲ್ ಟೂರ್ನಿಗಾಗಿ ದುಬೈನಲ್ಲಿದ್ದಾರೆ. ನವೆಂಬರ್ 10 ರವರೆಗೆ ಐಪಿಎಲ್ ಟೂರ್ನಿ ನಡೆಯಲಿದೆ. ಹೀಗಾಗಿ ಸದ್ಯ ಪುತ್ರಿ  ಭೇಟಿ ಅಸಾಧ್ಯವಾಗಿದೆ.

ಒಂದಲ್ಲ, ಎರಡಲ್ಲ, 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ!.

ಮಗಳನ್ನು ನೋಡದೆ ತುಂಬಾ ದಿನಗಳಾಗಿದೆ. ಪುತ್ರಿ ಈಗ ದೊಡ್ಡವಳಾಗಿದ್ದಾಳೆ. ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ. ಇನ್ನು ಹಲವು ದಿನಗಳ ಬಳಿಕ ಕ್ರಿಕೆಟ್ ಆಡುತ್ತಿದ್ದೇನೆ. ಅಭ್ಯಾಸ ನಡೆಸುತ್ತಿದ್ದೇನೆ. ದುಬೈ ಪಿಚ್‌ನಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಶಮಿ ಹೇಳಿದ್ದಾರೆ.

2013 ಹಾಗೂ 2018ರ ಐಪಿಎಲ್ ಆವೃತ್ತಿಯಿಂದ ಹೊರಗುಳಿದಿದ್ದ ಮೊಹಮ್ಮದ್ ಶಮಿ, 2019ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಕಳೆದ ಆವೃತ್ತಿಯಲ್ಲಿ 19 ವಿಕೆಟ್ ಕಬಳಿಸಿದ್ದರು. ಇದೀಗ ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

ಕೊರೋನಾ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಮೊಹಮ್ಮದ್ ಶಮಿ ವಲಸೆ ಕಾರ್ಮಿಕರು ಸೇರಿದಂತೆ ಹಲವರಿಗೆ ನೆರವಾಗಿದ್ದರು. ಈ ಮೂಲಕ ಸಂಕಷ್ಟಕ್ಕೆ ಸ್ಪಂದಿಸಿದ್ದರು.

Follow Us:
Download App:
  • android
  • ios