ಶಾರ್ಜಾ(ಅ.26):   ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಗಿದೆ.  ಶುಭಮನ್ ಗಿಲ್ ಹಾಗೂ ನಾಯಕ ಇಯಾನ್ ಮಾರ್ಗನ್ ಹೊರತು ಪಡಿಸಿದರೆ ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳು ಬಹುಬೇಗನೆ ಪೇವಿಲಿಯನ್ ಸೇರಿಕೊಂಡರು. ಹೀಗಾಗಿ ಕೆಕೆಆರ್ ವಿಕೆಟ್ ನಷ್ಟಕ್ಕೆ ರನ್ ಸಿಡಿಸಿತು.

ಶುಭಮನ್ ಗಿಲ್ ಉತ್ತಮ ಆರಂಭ ನೀಡಿದರು. ಆದರೆ ನಿತೀಶ್ ರಾಣಾ, ಹಾಗೂ ರಾಹುಲ್ ತ್ರಿಪಾಠಿ ಅಬ್ಬರಿಸಲು ಸಾಧ್ಯವಾಗಿಲ್ಲ. ರಾಣಾ ಡಕೌಟ್ ಆದರೆ, ತ್ರಿಪಾಠಿ 7 ರನ್ ಸಿಡಿಸಿ ಔಟಾದರು. ಇನ್ನು ದಿನೇಶ್ ಕಾರ್ತಿಕ್ ಕೂಡ ಡಕೌಟ್ ಆದರು. ಗಿಲ್ ಹಾಗೂ ಇಯಾನ್ ಮಾರ್ಗನ್ ಜೊತೆಯಾಟ ಕೆಕೆಆರ್ ತಂಡಕ್ಕೆ ಚೇತರಿಕೆ ನೀಡಿತು.

ಸುನಿಲ್ ನರೈನ್, ಕಮಲೇಶ್ ನಾಗರಕೋಟಿ ಬಹಬೇಗನೆ ಪೆವಿಲಿಯನ್ ಸೇರಿಕೊಂಡರು. ಮಾರ್ಗನ್ 40 ರನ್ ಸಿಡಿಸಿ ಔಟಾದರು. ಗಿಲ್ 57 ರನ್ ಕಾಣಿಕೆ ನೀಡಿದರು. ಅಂತಿಮ ಹಂತದಲ್ಲಿ ಲ್ಯೂಕ್ ಫರ್ಗ್ಯೂಸನ್ ಅಜೇಯ 24 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ 9 ವಿಕೆಟ್ ನಷ್ಟಕ್ಕೆ 149 ರನ್ ಸಿಡಿಸಿತು.