ದುಬೈ(ಅ.04): ಗೆಲ್ಲಲೇ ಬೇಕೆಂಬ ಛಲದಲ್ಲಿ ಕಣಕ್ಕಿಳಿದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಠಿಣ ಹೋರಾಟ ನೀಡುತ್ತಿದೆ.  ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಕಿಂಗ್ಸ್ ಇಲೆವೆನ್ ಪಂಜಾಬ್ 4 ವಿಕೆಟ್ ನಷ್ಟಕ್ಕೆ 178 ರನ್ ಸಿಡಿಸಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ತಂಡಕ್ಕೆ ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 61 ರನ್ ಜೊತೆಯಾಟ ನೀಡಿತು. ಮಯಾಂಕ್ 19 ಎಸೆತದಲ್ಲಿ 26 ರನ್ ಸಿಡಿಸಿ ಔಟಾದರು. ಮನ್ದೀಪ್ ಸಿಂಗ್ 16 ಎಸೆತದಲ್ಲಿ 2 ಭರ್ಜರಿ ಸಿಕ್ಸರ್ ನೆರವಿನಿಂದ 27 ರನ್ ಸಿಡಿಸಿದರು.

ಕೆಎಲ್ ರಾಹುಲ್ ಬ್ಯಾಟಿಂಗ್ ಮುಂದುವರಿಸಿದರು. ನಿಕೊಲಸ್ ಪೂರನ್ ಜೊತೆ ಸೇರಿದ ರಾಹುಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದರು. ಪೂರನ್ 17 ಎಸೆತದಲ್ಲಿ 33 ರನ್ ಸಿಡಿಸಿ ಔಟಾದರು. ಕೆಎಲ್ ರಾಹುಲ್ 63 ರನ್ ಸಿಡಿಸಿ ನಿರ್ಗಮಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಅಜೇಯ 11 ರನ್ ಹಾಗೂ ಸರ್ಫರಾಜ್ ಖಾನ್ ಅಜೇಯ 14 ರನ್ ಸಿಡಿಸಿದರು.

ಈ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ 4 ವಿಕೆಟ್ ನಷ್ಟಕ್ಕೆ 178ರನ್ ಸಿಡಿಸಿತು. ಇದೀಗ ರನ್ ಟಾರ್ಗೆಟ್ ಚೆನ್ನೈಗೆ ಅಸಾಧ್ಯವಲ್ಲ. ಆದರೆ ಚೇಸಿಂಗ್‌ನಲ್ಲಿ ಪದೇ ಪದೆ ಎಡವುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಕಠಿಣ ಸವಾಲು ಎದುರಿಸಲಿದೆ. ಪಂಜಾಬ್ ವೇಗಿ ಮೊಹಮ್ಮದ್ ಶಮಿ ದಾಳಿಗೆ ದಿಟ್ಟ ಉತ್ತರ ನೀಡಬೇಕಾಗಿದೆ.