ಅಬುಧಾಬಿ(ಅ.10): ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಕೋಲ್ಕತ ನೈಟ್‌ ರೈಡರ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಐಪಿಎಲ್ ಟೂರ್ನಿಯ 24ನೇ ಪಂದ್ಯ ಇದಾಗಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಕೆ.ಎಲ್ ರಾಹುಲ್ ನೇತೃತ್ವದ ಪಂಜಾಬ್ ತಂಡ ಇಂದು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಉಭಯ ತಂಡದಲ್ಲಿ ಒಂದೊಂದು ಬದಲಾವಣೆ ಮಾಡಲಾಗಿದೆ. ಕೆಕೆಆರ್ ತಂಡದಲ್ಲಿ ಶಿವಂ ಮಾವಿ ಬದಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಪಂಜಾಬ್ ತಂಡದಲ್ಲಿ ಶೆಲ್ಡಾನ್ ಕಾಟ್ರೆಲ್ ಬದಲಿಗೆ ಕ್ರಿಸ್ ಜೋರ್ಡನ್ ಸ್ಥಾನ ಪಡೆದಿದ್ದಾರೆ.

ಕಿಂಗ್ಸ್ ಇಲೆವನ್ ಪಂಜಾಬ್ ತಂಡವು ಆಡಿದ 6 ಪಂದ್ಯಗಳ ಪೈಕಿ 1 ಗೆಲುವು ಹಾಗೂ 5 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೆ, ಕೋಲ್ಕತ ನೈಟ್‌ ರೈಡರ್ಸ್ ತಂಡ 5 ಪಂದ್ಯಗಳಲ್ಲಿ 3 ಗೆಲುವು ಹಾಗೂ 2 ಸೋಲಿನೊಂದಿಗೆ 4ನೇ ಸ್ಥಾನದಲ್ಲಿದೆ.

ತಂಡಗಳು ಹೀಗಿವೆ:

ಕಿಂಗ್ಸ್ ಇಲೆವೆನ್ ಪಂಜಾಬ್:

ಕೋಲ್ಕತ ನೈಟ್‌ ರೈಡರ್ಸ್‌: