Asianet Suvarna News Asianet Suvarna News

IPL 2020: ಪಂಜಾಬ್‌ಗೆ 177 ರನ್ ಟಾರ್ಗೆಟ್ ನೀಡಿದ ಮುಂಬೈ!

ಮುಂಬೈ ಇಂಡಿಯನ್ಸ್ ದಿಟ್ಟ ಹೋರಾಟದಿಂದ ತಂಡಕ್ಕೆ ಕಿಂಗ್ಸ್ ಇಲೆವೆನ್ ವಿರುದ್ಧ ಉತ್ತಮ ಮೊತ್ತ ಪೇರಿಸಿದೆ.. ಕ್ವಿಂಟನ್ ಡಿಕಾಕ್ ಹಾಗೂ ಕ್ರುನಾಲ್ ಪಾಂಡ್ಯ , ಅಂತಿಮ ಹಂತದಲ್ಲಿ ಕೀರನ್ ಪೋಲಾರ್ಡ್ ಹಾಗೂ ನತನ್ ಕೌಲ್ಟರ್ ನೈಲ್ ಹೋರಾಟದಿಂದ ಮುಂಬೈ ಇಂಡಿಯನ್ಸ್ 176ರನ್ ಸಿಡಿಸಿದೆ.

IPL 2020 Kings XI Punjab restrict mumbai indians by 177 runs ckm
Author
Bengaluru, First Published Oct 18, 2020, 9:17 PM IST
  • Facebook
  • Twitter
  • Whatsapp

ದುಬೈ(ಅ.18):  ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕ್ವಿಂಟನ್ ಡಿಕಾಕ್ ಸಿಡಿಸಿದ ಅರ್ಧಶತಕ ಹಾಗೂ ಕ್ರುನಾಲ್ ಪಾಂಡ್ಯ ಹೋರಾಟದಿಂದ ಮುಂಬೈ ಇಂಡಿಯನ್ಸ್ 6 ವಿಕೆಟ್ ನಷ್ಟಕ್ಕೆ 177 ರನ್ ಸಿಡಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ ಕೇವಲ 9 ರನ್ ಸಿಡಿಸಿ ಔಟಾದರು. ಕ್ವಿಂಟನ್ ಡಿಕಾಕ್ ಹೋರಾಟ ಮುಂದುವರಿಸಿದರು. ಆದರೆ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಅಬ್ಬರಿಸಲಿಲ್ಲ. 

ಡಿಕಾಕ್ ಜೊತೆ ಸೇರಿ ಕ್ರುನಾಲ್ ಪಾಂಡ್ಯ ಹೋರಾಟ ಮುಂದುವರಿಸಿದರು. ಕ್ರುನಾಲ್ ಪಾಂಡ್ಯ 34 ರನ್ ಸಿಡಿಸಿ ಔಟಾದರು. ಇನ್ನು ಹಾಫ್ ಸೆಂಚುರಿ ಸಿಡಿಸಿ ಮುನ್ನಗ್ಗುತ್ತಿದ್ದ ಡಿಕಾಕ್ 53 ರನ್ ಸಿಡಿಸಿ ನಿರ್ಗಮಿಸಿದರು. 

ಅಂತಿಮ ಹಂತದಲ್ಲಿ ಕೀರನ್ ಪೋಲಾರ್ಡ್ ನತನ್ ಕೌಲ್ಟರ್ ನೈಲ್ ಹೋರಾಟದಿಂದ ಮುಂಬೈ ಚೇತರಿಸಿಕೊಂಡಿತು. ಪೋಲಾರ್ಡ್ ಅಜೇಯ 34 ಹಾಗೂ ನತನ್ ಅಜೇಯ 24 ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 6 ವಿಕೆಟ್ ನಷ್ಟಕ್ಕೆ 176 ರನ್ ಸಿಡಿಸಿತು. 

Follow Us:
Download App:
  • android
  • ios