ಶಾರ್ಜಾ(ನ.03):  ಪ್ಲೇ ಆಫ್ ಸ್ಥಾನಕ್ಕೆ ಲಗ್ಗೆ ಇಡಲು ಮುಂಬೈ ವಿರುದ್ಧದ ಅಂತಿಮ ಲೀಗ್ ಪಂದ್ಯ ಗೆಲ್ಲಲೇಬೇಕಾದ ಒತ್ತಡಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್ ಸರಿಯಾದ ಹಾದಿಯಲ್ಲಿ ಮುನ್ನಡೆಯುತ್ತಿದೆ. ಮುಂಬೈ ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದ ಹೈದರಾಬಾದ್ ಇದೀಗ 150 ರನ್ ಟಾರ್ಗೆಟ್ ಪಡೆದಿದೆ.

ತಂಡಕ್ಕೆ ನಾಯಕ ರೋಹಿತ್ ಶರ್ಮಾ ಮರಳಿದರೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಲಿಲ್ಲ. ರೋಹಿತ್ ಶರ್ಮಾ ಕೇವಲ 4 ರನ್ ಸಿಡಿಸಿ ಔಟಾದರು. ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯಕುಮಾರ್ ಯಾದವ್ ಜೊತೆಯಾಟದಿಂದ ಮುಂಬೈ ಚೇತರಿಸಿಕೊಂಡಿತು. ಆದರೆ ಡಿಕಾಕ್ 25 ರನ್ ಸಿಡಿಸಿ ಔಟಾದರು. ಸೂರ್ಯಕುಮಾರ್ ಯಾದವ್ 36 ರನ್ ಸಿಡಿಸಿ ಔಟಾದರು.

ಇಶಾನ್ ಕಿಶನ್ ಹೋರಾಟ ಮುಂದುವರಿಸಿದರು. ಆದರೆ ಕ್ರುನಾಲ್ ಪಾಂಡ್ಯ, ಸೌರಬ್ ತಿವಾರಿ ಬಹುಬೇಗನೆ ಪೆವಿಲಿಯನ್ ಸೇರಿದರು. ಇಶಾನ್ ಕಿಶನ್ 33 ರನ್ ಸಿಡಿಸಿ ಔಟಾದರು.  ನತನ್ ಕೌಲ್ಟರ್ ನೈಲ್ ಕೇವಲ 1 ರನ್ ಸಿಡಿಸಿ ಔಟಾದರು. ಆದೆ ಕೀರನ್ ಪೊಲಾರ್ಡ್ ಸಿಡಿಸಿದ 41 ರನ್ ಸಿಡಿಸಿ ಔಟಾದರು. ಮುಂಬೈ ಇಂಡಿಯನ್ಸ್  8 ವಿಕೆಟ್ ನಷ್ಟಕ್ಕೆ 149 ರನ್ ಸಿಡಿಸಿತು.