ಶಾರ್ಜಾ(ಅ.31): ಮಹತ್ವದ ಪಂದ್ಯ, ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳಲು ಮಹತ್ವದ ಪಂದ್ಯ. ಆದರೆ ಆರ್‌ಸಿಬಿ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಲಿಲ್ಲ. ಜೋಶುವಾ ಫಿಲಿಪ್ ಸಿಡಿಸಿದ 32 ರನ್ ನೆರವಿನಿಂದ ಆರ್‌ಸಿಬಿ  7 ವಿಕೆಟ್ ನಷ್ಟಕ್ಕೆ 121 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಬೆಂಗಳೂರು ತಂಡಕ್ಕೆ ಆರಂಭದಲ್ಲೇ ವಿಕೆಟ್ ಪತನ ಆಘಾತ ತಂದಿತು. ದೇವದತ್ ಪಡಿಕ್ಕಲ್ ಕೇವಲ 5 ರನ್ ಸಿಡಿಸಿ ಔಟಾದರು. ನಾಯಕ ವಿರಾಟ್ ಕೊಹ್ಲಿ ಕೇವಲ 7 ರನ್ ಸಿಡಿಸಿ ಔಟಾದರು. ಜೋಶುವಾ ಫಿಲಿಪ್ ಹಾಗೂ ಎಬಿ ಡಿವಿಲಿಯರ್ಸ್ ಹೋರಾಟ ತಂಡಕ್ಕೆ ಕೊಂಚ ಚೇತರಿಕೆ ನೀಡಿತು.

ಎಬಿ ಡಿವಿಲಿಯರ್ಸ್ ಕೇವಲ 24 ರನ್ ಸಿಡಿಸಿ ಔಟಾದರು. ಜೋಶುವಾ ಫಿಲಿಪ್ 32 ರನ್ ಕಾಣಿಕೆ ನೀಡಿದರು. ವಾಶಿಂಗ್ಟನ್ ಸುಂದರ್ 21 ರನ್ ಸಿಡಿಸಿದರು. ಗುರುಕೀರತ್ ಸಿಂಗ್ ಸಿಡಿಸಿದ ಅಜೇಯ 15 ರನ್ ನೆರವಿನಿಂದ ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 120 ರನ್ ಸಿಡಿಸಿತು.  120 ಎಸೆತದಲ್ಲಿ 121 ರನ್ ಸುಲಭ ಗುರಿಯನ್ನು ಹೈದರಾಬಾದ್ ತಂಡಕ್ಕೆ ನೀಡಲಾಗಿದೆ. ಇನ್ನು ಶಾರ್ಜಾ ಪಿಚ್‌ಗೆ ಅನುಗುಣವಾಗಿ ಆರ್‌ಸಿಬಿ ಕೂಡ ಬೌಲಿಂಗ್‌ನಲ್ಲಿ ಬದಲಾವಣೆ ಮಾಡಿಕೊಂಡಿದೆ.