ದುಬೈ(ನ.01): ರಾಜಸ್ಥಾನ ರಾಯಲ್ಸ್ ವಿರುದ್ಧ  ನಾಯಕ ಇಯಾನ್ ಮಾರ್ಗನ್  ಸಿಡಿಸಿದ ಹಾಫ್ ಸೆಂಚುರಿ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ 191 ರನ್ ಸಿಡಿಸಿದೆ. ಉಭಯ ತಂಡಗಳ ಅಂತಿಮ ಲೀಗ್ ಪಂದ್ಯ ಇದಾಗಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಪಂದ್ಯದ ಫಲಿತಾಂಶ ಪ್ಲೇ ಆಫ್ ಸ್ಥಾನಕ್ಕೆ ಅತ್ಯಂತ ಅವಶ್ಯಕವಾಗಿದೆ. ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.

ಬ್ಯಾಟಿಂಗ್ ಇಳಿದ ಕೆಕೆಆರ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಿತೀಶ್ ರಾಣಾ ಡಕೌಟ್ ಆದರು. ಆದರೆ ಶುಭಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ಜೊತೆಯಾಟದಿಂದ ಕೆಕೆಆರ್ ಚೇತರಿಸಿಕೊಂಡಿತು. ಗಿಲ್  24 ಎಸೆತದಲ್ಲಿ 36 ರನ್ ಕಾಣಿಕೆ ನೀಡಿದರು. ಇದರ ಬೆನ್ನಲ್ಲೇ ಸುನಿಲ್ ನರೈನ್ ಶೂನ್ಯಕ್ಕೆ ಔಟಾದರು.

ನಾಯಕ ಇಯಾನ್ ಮಾರ್ಗನ್ ಹೋರಾಟ ಮುಂದುವರಿಸಿದರು. ಆದರೆ ದಿನೇಶ್ ಕಾರ್ತಿಕ್ ಡಕೌಟ್ ಆದರು. ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಆ್ಯಂಡ್ರೆ ರಸೆಲ್ 25 ರನ್ ಸಿಡಿಸಿ ಔಟಾದರು. ಇಯಾನ್ ಮಾರ್ಗನ್ ಅಜೇಯ 68 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 191 ರನ್ ಸಿಡಿಸಿದೆ.